ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಹಾಗೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ (Rishabh Shetty) ಜೊತೆಗಿನ ಸ್ನೇಹ ತೀರಾ ಹಳೆಯದು ಎನ್ನುವ ಮೂಲಕ ನವಾಜುದ್ದೀನ್ ಸಿದ್ಧಿಕಿ ಅಚ್ಚರಿಯ ಸಂದೇಶವೊಂದನ್ನು ರವಾಣಿಸಿದ್ದಾರೆ. ಕಾಂತಾರ (Kantara) ಸಿನಿಮಾದ ಯಶಸ್ಸಿನ ನಂತರ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ನವಾಜುದ್ದೀನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದೊಂದು ಆಕಸ್ಮಿಕ ಭೇಟಿ ಎಂದು ಹೇಳಲಾಗಿತ್ತು.
ಕಾಂತಾರ ಯಶಸ್ಸಿನ ಬೆನ್ನಲ್ಲೇ ತಮ್ಮ ಮನೆಗೆ ರಿಷಬ್ ಮತ್ತು ಟೀಮ್ ಕರೆಯಿಸಿಕೊಂಡಿದ್ದ ನವಾಜುದ್ದೀನ್ ಕಾಂತಾರ ಟೀಮ್ ಗೆ ಗೌರವ ಸೂಚಿಸಿದ್ದರು. ರಜನಿಕಾಂತ್ ಸೇರಿದಂತೆ ಹಲವರು ಇದೇ ರೀತಿಯಲ್ಲೇ ಗೌರವ ನೀಡಿದ್ದರಿಂದ, ನವಾಜುದ್ದೀನ್ ಭೇಟಿ ಕೂಡ ಹಾಗೆಯೇ ಎಂದು ನಂಬಲಾಗಿತ್ತು. ಆದರೆ, ನವಾಜುದ್ದೀನ್ ಮತ್ತು ರಿಷಬ್ ಹಲವು ವರ್ಷಗಳ ಸ್ನೇಹಿತರು (Friends) ಎನ್ನುವುದನ್ನು ಸ್ವತಃ ನವಾಜುದ್ದೀನ್ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್
ರಿಷಬ್ ಮತ್ತು ನಾನು ಹಳೆಯ ಸ್ನೇಹಿತರು. ರಂಗಭೂಮಿಯಲ್ಲಿ ನಮ್ಮಿಬ್ಬರಿಗೂ ಒಬ್ಬರೇ ಗುರುಗಳು. ಅವರು ರಂಗಭೂಮಿಯಲ್ಲಿ ಸಾಕಷ್ಟು ಸಕ್ರೀಯರಾಗಿದ್ದಾರೆ. ಆದರೆ, ನಾನು ಅಲ್ಲಿಂದ ಬಂದು ಸಿನಿಮಾ ರಂಗದಲ್ಲಿ ತೊಡಗಿಕೊಂಡು ಬಿಟ್ಟೆ. ನನಗೂ ಮತ್ತು ರಿಷಬ್ ಯೋಜನೆಗಳಿಗೂ ಸಾಕಷ್ಟು ಸಾಮಿಪ್ಯವಿದೆ. ಹಾಗಾಗಿ ಒಟ್ಟಿಗೆ ಕೂತು ಕೆಲ ಹೊತ್ತು ಹರಟೆ ಹೊಡೆದೆವು ಎಂದು ನವಾಜುದ್ದೀನ್ ಹೇಳಿಕೊಂಡಿದ್ದಾರೆ.
ಕಾಂತಾರ 2 ಸಿನಿಮಾದಲ್ಲಿ ನವಾಜುದ್ದೀನ್ ನಟಿಸಲಿದ್ದಾರೆ ಎನ್ನುವ ಸುದ್ದಿಯಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಿನಿಮಾ ಶುರುವಾಗಲು ಇನ್ನೂ ಟೈಮ್ ಇದೆ. ನನಗೆ ಅದರಲ್ಲಿ ಪಾತ್ರವಿದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೆ, ಅವರು ಕರೆದರೆ ಕಂಡಿತಾ ಹೋಗಿ ನಟಿಸುತ್ತೇನೆ ಎಂದು ತಿಳಿಸಿದ್ದಾರೆ.