ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿತು.
ಶನಿವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿದೊಡ್ಡ ರೋಡ್ ಶೋ ನಡೆಸಿದರು. ಬೆಂಗಳೂರಿನಲ್ಲಿ ಬರೋಬ್ಬರಿ 29.8 ಕಿಲೋಮೀಟರ್ ರೋಡ್‌ಶೋ ನಡೆಸುವ ಮೂಲಕ ಬಿಜೆಪಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಶುರುವಾದ ಮೋದಿ ಮೆಗಾ ರೋಡ್ ಶೋ 11 ಅಸೆಂಬ್ಲಿ ಕ್ಷೇತ್ರಗಳನ್ನು ಹಾದುಹೋಗಿ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿ ಕೊನೆಗೊಂಡಿತು. ಇದನ್ನೂ ಓದಿ: ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್ ರೋಡ್ ಶೋ
178 ನಿಮಿಷಗಳ ಕಾಲ ಸಾಗಿದ ಮೋದಿ ರೋಡ್ ಶೋಗೆ ಐತಿಹಾಸಿಕ ಎನ್ನುವಂತಹ ಸ್ಪಂದನೆ ಸಿಕ್ಕಿತು. ರಸ್ತೆಯ ಇಕ್ಕೇಲಗಳಲ್ಲಿ ನಿಂತ ಲಕ್ಷಾಂತರ ಮೋದಿ ಅಭಿಮಾನಿಗಳು ಮೋದಿ.. ಮೋದಿ.. ಮೋದಿ.. ಅಂತಾ ದಾರಿಯುದ್ದಕ್ಕೂ ಘೋಷಣೆ ಕೂಗಿದ್ರು. ಹೂಮಳೆಗೈದು ಸಂಭ್ರಮಿಸಿದ್ರು. ರೋಡ್‌ಶೋ ಉದ್ದಕ್ಕೂ ಸಿಕ್ಕ ಅಭೂತಪೂರ್ವ ಸ್ಪಂದನೆ ನೋಡಿ ಮೋದಿ ಫುಲ್ ಖುಷ್ ಆಗಿದ್ರು. ಇದನ್ನೂ ಓದಿ: ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು
ಈ ವೇಳೆ ಮೋದಿಯನ್ನು ನೋಡಿದ ಸಂತಸವನ್ನು ಮಹಿಳೆಯೊಬ್ಬರು ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ. ಮೋದಿಯನ್ನು ನೋಡಿ ನನಗೆ ದೇವರನ್ನೇ ನೋಡಿದಷ್ಟು ಸಂತೋಷವಾಯ್ತು ಎಂದಿದ್ದಾರೆ.
ನಮ್ಮದು ಇಲ್ಲೇ ಹತ್ತಿರದ ಮನೆ. ಬೆಳಗ್ಗಿನಿಂದಲೂ ಮೋದಿಯನ್ನು ನೋಡುವುದಕ್ಕಾಗಿಯೇ ಕಾದು ಕುಳಿತಿದ್ದೆ. ಮೋದಿ ಅವರನ್ನ ನೋಡುತ್ತಿದ್ದಂತೆ ಕಣ್ಣಲ್ಲಿ ಆನಂದಭಾಷ್ಪ ತುಂಬಿಬಂತು. ನನಗಂತೂ ದೇವರನ್ನೇ ನೋಡಿದಷ್ಟು ಖುಷಿ ಆಯ್ತು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಇಲ್ಲಿದೆ.