ಬೆಂಗಳೂರು: ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನೂ ನಾಲ್ಕು ದಿನವಷ್ಟೇ ಬಾಕಿಯಿದ್ದು, ಭಾನುವಾರ (ಮೇ 7) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೈನಲ್ ರೋಡ್ ಶೋ (ModiRoadshow) ನಡೆಯಲಿದೆ.
Advertisement
ಶನಿವಾರವೂ ಬೆಂಗಳೂರಿನಲ್ಲಿ (Bengaluru) ಪ್ರಧಾನಿ ನರೇಂದ್ರ ಮೋದಿ ಅತಿದೊಡ್ಡ ರೋಡ್ ಶೋ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 29.8 ಕಿಲೋಮೀಟರ್ ರೋಡ್‌ಶೋ ನಡೆಸುವ ಮೂಲಕ ಬಿಜೆಪಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಶುರುವಾದ ಮೋದಿ ಮೆಗಾ ರೋಡ್ ಶೋ 11 ಅಸೆಂಬ್ಲಿ ಕ್ಷೇತ್ರಗಳನ್ನು ಹಾದುಹೋಗಿ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿ ಕೊನೆಗೊಂಡಿತು. ಇದನ್ನೂ ಓದಿ: ಬೆಂಗ್ಳೂರು, ಮೈಸೂರಿನ ಫೈನಾನ್ಸಿಯರ್ ಮನೆಗಳ ಮೇಲೆ IT ರೇಡ್ – 20 ಕೋಟಿ ಹಣ ವಶ
Advertisement
Advertisement
178 ನಿಮಿಷಗಳ ಕಾಲ ಸಾಗಿದ ಮೋದಿ ರೋಡ್ ಶೋಗೆ ಐತಿಹಾಸಿಕ ಎನ್ನುವಂತಹ ಸ್ಪಂದನೆ ಸಿಕ್ಕಿತು. ರಸ್ತೆಯ ಇಕ್ಕೇಲಗಳಲ್ಲಿ ನಿಂತ ಲಕ್ಷಾಂತರ ಜನ ಮೋದಿ ಪರ ಘೋಷಣೆ ಕೂಗಿದ್ರು. ಹೂಮಳೆಗೈದು ಸಂಭ್ರಮಿಸಿದ್ರು. ರೋಡ್‌ಶೋ ಉದ್ದಕ್ಕೂ ಸಿಕ್ಕ ಅಭೂತಪೂರ್ವ ಸ್ಪಂದನೆ ನೋಡಿ ಮೋದಿ ಫುಲ್ ಖುಷ್ ಆಗಿದ್ರು. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋದಿ ಬೃಹತ್ ರೋಡ್ ಶೋ – ರೇಷ್ಮೆಯ ಮೈಸೂರು ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ
Advertisement
ಭಾನುವಾರ (ಮೇ 7) ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯ ರೋಡ್‌ಶೋದ 2ನೇ ಚರಣ ನಡೆಯಲಿದೆ. ನೀಟ್ ಪರೀಕ್ಷೆಗೆ ಬರುವ ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿ ಎಲ್ಲಾ ರೀತಿಯ ಮುಂಜಾಗ್ರತೆಗಳನ್ನು ಪೊಲೀಸ್ ಇಲಾಖೆ ಮತ್ತು ಬಿಜೆಪಿ ಕೈಗೊಂಡಿದೆ. ರೋಡ್‌ಶೋ ಮುಗಿಸಿ ಪ್ರಧಾನಿ ಮೋದಿ ಶಿವಮೊಗ್ಗ ಮತ್ತು ನಂಜನಗೂಡಿನಲ್ಲಿ ಮತಬೇಟೆ ನಡೆಸಲಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರನ ದರ್ಶನವನ್ನೂ ಪಡೆಯಲಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ
ರೋಡ್ ಶೋ ಪ್ಲಾನ್ ಹೇಗೆ?
* ಬೆ.10 ಗಂಟೆಗೆ ಆರಂಭ – ಬೆ.11.30 ಗಂಟೆಗೆ ಅಂತ್ಯ
* 6.5 ಕಿಲೋಮೀಟರ್ ರೋಡ್ ಶೋ
* ನ್ಯೂ ತಿಪ್ಪಸಂದ್ರ ರೋಡ್ – ಟ್ರಿನಿಟಿ ಸರ್ಕಲ್
* 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ
ಎಲ್ಲೆಲ್ಲಿ ಮೋದಿ ರೋಡ್ ಶೋ?
* ನ್ಯೂ ತಿಪ್ಪಸಂದ್ರ ಮುಖ್ಯರಸ್ತೆ
* 80 ಅಡಿ ರಸ್ತೆ ಜಂಕ್ಷನ್, ಹೆಚ್‌ಎಎಲ್ 2ನೇ ಹಂತ
* 12ನೇ ಮುಖ್ಯರಸ್ತೆ ಜಂಕ್ಷನ್, ಹೆಚ್‌ಎಎಲ್ 2ನೇ ಹಂತ
* ಹೆಚ್‌ಎಎಲ್ 100 ಫೀಟ್ ರೋಡ್ ಜಂಕ್ಷನ್
* ಸಿಎಂಹೆಚ್ ರೋಡ್
* ಓಲ್ಡ್ ಮದ್ರಾಸ್ ರೋಡ್
* ಟ್ರಿನಿಟಿ ಸರ್ಕಲ್