ನವದೆಹಲಿ: ವಿಮಾನದ ಕಾಕ್‍ಪಿಟ್ (Cockpit) ಪ್ರವೇಶಿಸಲು ಸ್ನೇಹಿತೆಗೆ ಅನುಮತಿ ನೀಡಿದ್ದ ಪೈಲೆಟ್ ಲೋಪಕ್ಕಾಗಿ ಏರ್ ಇಂಡಿಯಾ (Air India) ಸಿಇಒ ಕ್ಯಾಂಪ್‍ಬೆಲ್ ವಿಲ್ಸನ್ ಹಾಗೂ ಭದ್ರತಾ ಮುಖ್ಯಸ್ಥ ಹೆನ್ರಿ ಡೊನೊಹೋ ಅವರಿಗೆ ಡಿಜಿಸಿಎ (DGCA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಘಟನೆಯ ಕುರಿತು ಡಿಜಿಸಿಎಗೆ ಸಮಯೋಚಿತ ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾ ಸಿಇಒ ಮತ್ತು ವಿಮಾನ ಸುರಕ್ಷತಾ ಮುಖ್ಯಸ್ಥರಿಗೆ ಏ.21 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೂ ಇಲ್ಲಿಯವರೆಗೂ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏರ್ ಇಂಡಿಯಾ ಸುರಕ್ಷತಾ ಸೂಚನೆಗಳನ್ನು ಉಲ್ಲಂಘಿಸಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ
ಘಟನೆಯ ತನಿಖೆಯಲ್ಲಿ ವಿಳಂಬವಾಗಿದೆ. ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಇಬ್ಬರೂ ಕಾರ್ಯನಿರ್ವಾಹಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ದುಬೈ (Dubai), ದೆಹಲಿ (Delhi) ವಿಮಾನದ ಸಂಪೂರ್ಣ ಸಿಬ್ಬಂದಿಯನ್ನು ಡಿ ರೋಸ್ಟರ್ ಮಾಡುವಂತೆ ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.27 ರಂದು ದುಬೈ ಹಾಗೂ ದೆಹಲಿ ನಡವೆ ಸಂಚರಿಸುವ ವಿಮಾನದಲ್ಲಿ ಪೈಲಟ್ ಸ್ನೇಹಿತೆಗೆ ಕಾಕ್‍ಪಿಟ್ ಪ್ರವೇಶಕ್ಕೆ ಅನುಮತಿ ನೀಡಿ, ಒಳಗೆ ಬಿಟ್ಟಿದ್ದರು. ಈ ಬಗ್ಗೆ ವಿಮಾನದ ಕ್ಯಾಬಿನ್ ಸಿಬ್ಬಂದಿಯೊಬ್ಬರು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (Directorate General of Civil Aviation) ದೂರು ಸಲ್ಲಿಸಿದ್ದರು. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್ ಫೋಟೋ ರಿಲೀಸ್