ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ವಿಷ ಸರ್ಪಕ್ಕೆ ಹೋಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹೇಳಿಕೆಯಿಂದ ಬಿಜೆಪಿಗೆ (BJP) ಲಾಭ ಆಗಲಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ (K Sudhakar) ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಾತನಾಡಿದ ಅವರು, ಖರ್ಗೆ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ 2 ರಿಂದ 3% ಮತ ಹೆಚ್ಚಳವಾಗಲಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಈ ರೀತಿ ಭಾಷೆ ಬಳಸೋದು ಸರಿ ಅಲ್ಲ. 130 ಕೋಟಿ ಭಾರತೀಯರನ್ನು ಅವರು ಅಪಮಾನ ಮಾಡಿದ್ದಾರೆ. ಮೋದಿಯವರು ವಿಶ್ವ ನಾಯಕರು. ಇದು ಖರ್ಗೆಯವರ ರಾಜಕೀಯ ದಿವಾಳಿತನ ವ್ಯಕ್ತಿತ್ವ ತೋರ್ಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್
ಮಲ್ಲಿಕಾರ್ಜುನ ಖರ್ಗೆಯವರ ಕಡೆಯಿಂದ ನಾನು ಇದನ್ನು ನೀರಿಕ್ಷೆ ಮಾಡಿರಲಿಲ್ಲ. ವೈಯಕ್ತಿಕ ನಿಂದನೆಗಳು ಮಾಡಬಾರದು. ವಿಷಯಾಧಾರಿತ ಆರೋಗ್ಯಕರ ಟೀಕೆಗಳು ಇರಬೇಕು. ಈ ರೀತಿ ಹೇಳಿಕೆಗಳಿಂದ ಅವರ ಸ್ಥಾನ ಮಾನ ಗೌರವಕ್ಕೆ ಧಕ್ಕೆಯಾಗಲಿದೆ. ಕರ್ನಾಟಕದ ಜನ ಈ ಮಾತಿನಿಂದ ಬಹಳಷ್ಟು ನೋವು ಅನುಭವಿಸಿದ್ದಾರೆ. ಹೀಗಾಗಿ ಅವರಿಗೆ ನಷ್ಟ ಬಿಜೆಪಿಗೆ ಲಾಭ ಆಗಲಿದೆ ಎಂದು ಸುಧಾಕರ್ ಟಾಂಗ್ ನೀಡಿದರು. ಇದನ್ನೂ ಓದಿ: ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ – ಯತ್ನಾಳ್ ಪ್ರಶ್ನೆ