Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚೀನಾದಲ್ಲಿ H3N8 ಡೆಡ್ಲಿ ವೈರಸ್‌ ಪತ್ತೆ – ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಂತೆ ಈ ವೈರಸ್‌!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಚೀನಾದಲ್ಲಿ H3N8 ಡೆಡ್ಲಿ ವೈರಸ್‌ ಪತ್ತೆ – ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಂತೆ ಈ ವೈರಸ್‌!

Latest

ಚೀನಾದಲ್ಲಿ H3N8 ಡೆಡ್ಲಿ ವೈರಸ್‌ ಪತ್ತೆ – ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಂತೆ ಈ ವೈರಸ್‌!

Public TV
Last updated: April 12, 2023 7:59 pm
Public TV
Share
2 Min Read
H3N8 3
SHARE

ಬೀಜಿಂಗ್‌: ವೈರಸ್‌ಗಳ ಆಗರ ಎಂದೇ ಕರೆಸಿಕೊಳ್ಳುವ ಚೀನಾದಲ್ಲಿ (China) ಮತ್ತೊಂದು ಡೆಡ್ಲಿ ವೈರಸ್‌ ಪತ್ತೆಯಾಗಿದೆ.

ಕಳೆದ ಮಾರ್ಚ್‌ 27 ರಂದು ಏವಿಯನ್‌ ಇನ್ಫ್ಲುಯೆನ್ಸಾ-ಎ (H3N8 Virus – ಹಕ್ಕಿಜ್ವರದ ರೀತಿಯ ವೈರಸ್‌) ವೈರಸ್‌ನಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಾಗ ಈವರೆಗೆ ಮೂರು ಪ್ರಕರಣಗಳು ಚೀನಾದಿಂದಲೇ ವರದಿಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

H3N8 4

ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವ ಸಾಮರ್ಥ್ಯ ಹೊಂದಿಲ್ಲ. ಜೊತೆಗೆ ವೈರಸ್‌ ನಿಂದ ಹರಡುವಿಕೆಯಲ್ಲಿ ಅಪಾಯದ ಪ್ರಮಾಣವೂ ಕಡಿಮೆ ಎಂದು ಪರಿಗಣಿಸಲಾಗಿದೆ.

ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ 56ರ ಮಹಿಳೆ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾದ ಒಂದು ತಿಂಗಳ ನಂತರ ಅವರು ನಿಧನರಾದರು. ಈ ಕುರಿತು ಮಾಹಿತಿ ಪಡೆದ ನಂತರ ವಿಶ್ವ ಆರೋಗ್ಯ ಸಂಸ್ಥೆ (WHO) ಕೋಳಿಗೆ ತಗುಲುವ ರೋಗಲಕ್ಷಣಗಳು (ಹಕ್ಕಿಜ್ವರದ ಲಕ್ಷಣಗಳು) ಮಹಿಳೆಯಲ್ಲಿ ಕಂಡುಬಂದಿದೆ ಎಂದು ಹೇಳಿದೆ. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

H3N8 1

ಏನಿದು H3N8 ವೈರಸ್?
ಉತ್ತರ ಅಮೆರಿಕದ ಜಲಪಕ್ಷಿಗಳಲ್ಲಿ ಕಂಡುಬಂದಿದ್ದ ಈ H3N8 ವೈರಸ್‌ 2002ರಿಂದ ಇತರ ದೇಶಗಳಿಗೆ ವ್ಯಾಪಿಸಿತು. ಈ ವೈರಸ್‌ ಕುದುರೆ, ನಾಯಿ ಹಾಗೂ ಸೀಲ್‌ನಂತಹ ಜಲಚರ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಕೋಳಿಯಂತಹ ಸಾಮಾನ್ಯ ಪಕ್ಷಿಗಳಲ್ಲೂ ಕಂಡುಬರುತ್ತದೆ. ಜೊತೆಗೆ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಆದರೆ ವೇಗವಾಗಿ ಹರಡುವುದಿಲ್ಲ. ನಿರ್ದಿಷ್ಟ ಸನ್ನಿವೇಶಗಳಲ್ಲಿ ಹರಡುತ್ತದೆ ಎಂದು ಹೇಳಲಾಗಿದೆ.

ಈ ವೈರಸ್‌ ಝೂನೋಟಿಕ್ ಇನ್ಫ್ಲುಯೆನ್ಸಾ ಸೋಂಕು ಆಗಿರುವುದರಿಂದ ಲಕ್ಷಣ ರಹಿತವಾಗಿ ರೋಗವನ್ನು ಉಂಟುಮಾಡಬಹುದು. ಸೌಮ್ಯ ಜ್ವರ, ತೀವ್ರತರಹದ ಉಸಿರಾಟ, ಜಠರ ಅಥವಾ ನರಗಳಲ್ಲಿ ಸಮಸ್ಯೆ ಉಂಟುಮಾಡುವ ರೋಗಲಕ್ಷಣಗಳ ಮೂಲಕ ವೈರಸ್‌ ನ್ಯೂನತೆಯನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

H3N8

H3N8 ವೈರಸ್‌ಗೆ ಲಸಿಕೆ ಇದೆಯೇ?
H3N8 ಇನ್ಫ್ಲುಯೆನ್ಸಾ-ಎ ವೈರಸ್‌ಗೆ ಈವರೆಗೂ ಲಸಿಕೆ ಕಂಡುಹಿಡಿದಿಲ್ಲ. ಹಾಗಾಗಿ ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಆಗುವ ಅಪಾಯದ ಪ್ರಮಾಣವನ್ನು ತಿಳಿಯಲು ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ.

ಮುನ್ನೆಚ್ಚರಿಕೆ ಕ್ರಮಗಳೇನು?
* ಯಾವುದೇ ವಸ್ತುವನ್ನು ಮುಟ್ಟುವ ಮುನ್ನ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಬೇಕು.
* ಆಲ್ಕೋಹಾಲ್‌ ಆಧಾರಿತ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಬಳಸಬೇಕು.
* ಮಾರುಕಟ್ಟೆ, ಫಾರ್ಮ್‌, ಪೌಲ್ಟ್ರಿ‌ಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.

TAGGED:chinaH3N8 VirusH3N8 ವೈರಸ್‌health departmentUSAwhoಚೀನಾಪ್ರಾಣಿವಿಶ್ವ ಆರೋಗ್ಯ ಸಂಸ್ಥೆವೈರಸ್
Share This Article
Facebook Whatsapp Whatsapp Telegram

Cinema news

Darshan 6
ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿ ನೇರ ಕೋರ್ಟ್ ವಿಚಾರಣೆಗೆ ದರ್ಶನ್‌ ಮನವಿ
Cinema Crime Karnataka Latest Main Post
Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories

You Might Also Like

Canada Pm and PM modi
Latest

ಫೆ.26ಕ್ಕೆ ಭಾರತಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ

Public TV
By Public TV
4 minutes ago
Uday Bhanu Chib Arrest
Latest

ಎಐ ಶೃಂಗಸಭೆಯಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ – ಯುವ ಕಾಂಗ್ರೆಸ್ ಮುಖ್ಯಸ್ಥ ಬಂಧನ

Public TV
By Public TV
55 minutes ago
CJ Roy 2
Bengaluru City

ಸಿ.ಜೆ.ರಾಯ್ ಕೇಸ್ – ಆತ್ಮಹತ್ಯೆ ಹಿಂದಿನ ಕಾರಣ ಮೇಲ್ನೋಟಕ್ಕೆ ರಿವೀಲ್

Public TV
By Public TV
2 hours ago
kamakshipalya police station
Bengaluru City

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್ – ಕ್ರಾಸ್ ಎಕ್ಸಾಮಿನ್ ವೇಳೆ ಪೊಲೀಸರ ಎಡವಟ್ಟು

Public TV
By Public TV
2 hours ago
Lucknow Murder
Crime

ಮಗನಿಂದಲೇ ತಂದೆಯ ಬರ್ಬರ ಹತ್ಯೆ – ಸಹೋದರಿ ಮುಂದೆಯೇ ದೇಹ ಪೀಸ್‌ ಪೀಸ್‌ ಮಾಡಿದ ಪಾಪಿ

Public TV
By Public TV
2 hours ago
Vegitables
Bengaluru City

ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?