ಬಾಲಿವುಡ್ (Bollywood) ಜೋಡಿ ಸಿದ್-ಕಿಯಾರಾ (Siddarth Malhotra-Kiara Advani) ದಾಂಪತ್ಯ ಜೀವನವನ್ನ ಖುಷಿಯಾಗಿ ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಹಸೆಮಣೆ ಏರುವ ಮೂಲಕ ಗುಡ್ ನ್ಯೂಸ್ ನೀಡಿದ್ದ ಈ ಜೋಡಿ ಈಗ ಮತ್ತೆ ಸಿನಿಮಾ ವಿಚಾರವಾಗಿ ಸಿಹಿಸುದ್ದಿ ನೀಡಿದ್ದಾರೆ.
ಸಿದ್-ಕಿಯಾರಾ ಜೋಡಿ `ಶೇರ್‌ಷಾ’ ಸಿನಿಮಾದ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದರು. ಈ ಸಿನಿಮಾದಿಂದ ಕ್ಯೂಟ್ ಕಪಲ್ ಆಗಿ ಹೈಲೈಟ್ ಆಗಿದ್ದರು. ಶೇರ್‌ಷಾ ಸಿನಿಮಾದಿಂದಲೇ ಇಬ್ಬರಿಗೂ ಪ್ರೇಮಾಂಕುರವಾಗಿ ಮದುವೆಯಾದರು. ಈಗ ಮತ್ತೆ ತೆರೆಯ ಮೇಲೂ ರೊಮ್ಯಾನ್ಸ್ ಮಾಡೋದ್ದಕ್ಕೆ `ಶೇರ್‌ಷಾ’ ಜೋಡಿ ರೆಡಿಯಾಗಿದ್ದಾರೆ. ಈ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ರೊಮ್ಯಾಂಟಿಕ್ ಆಗಿ ಪ್ರೇಮಿಗಳ ದಿನ ಆಚರಿಸಿದ ಯಶ್- ರಾಧಿಕಾ
ಕರಣ್ ಜೋಹರ್ (Karan Johar) ಅವರು ಅನೇಕ ಸೆಲೆಬ್ರಿಟಿಗಳ ಮಕ್ಕಳನ್ನು ಲಾಂಚ್ ಮಾಡಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಅವರನ್ನು `ಸ್ಟುಡೆಂಟ್ ಆಫ್ ದಿ ಇಯರ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಕರಣ್ ಪರಿಚಯಿಸಿದರು. ಹೀಗಾಗಿ ಇಬ್ಬರ ಮಧ್ಯೆ ಆಪ್ತತೆ ಇದೆ. ಕಿಯಾರಾ ನಟನೆಯ `ಲಸ್ಟ್ ಸ್ಟೋರಿಸ್’ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಿದರು. ಅಲ್ಲಿಂದ ಕಿಯಾರಾ ಜೊತೆಗೆ ಕರಣ್ ಒಳ್ಳೆಯ ಫ್ರೆಂಡ್‌ಶಿಪ್ ಬೆಳೆಸಿಕೊಂಡರು. ಹೀಗಾಗಿ, ಸಿದ್ದಾರ್ಥ್ ಹಾಗೂ ಕಿಯಾರಾಗೆ ಕರಣ್ ಮೆಂಟರ್ ಕೂಡ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k



