ಮೈಸೂರು: ಸಿದ್ದರಾಮಯ್ಯ (Siddaramaiah) ಅವರು ಕೋಲಾರದಿಂದ ಸ್ಪರ್ಧಿಸುವುದು ಖಚಿತ. ಹಾಗಾಗಿ ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ಈಗಾಗಲೇ ಕೋಲಾರದಿಂದ (Kolar) ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಅವರ ಸ್ಪರ್ಧೆ ಕೋಲಾರದಿಂದ ಖಚಿತ, ವರುಣಾ ಕ್ಷೇತ್ರದಿಂದ (Varuna Constituency) ನಾನು ಸ್ಪರ್ಧೆ ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ
ವರುಣಾ ಕ್ಷೇತ್ರ (Varuna Constituency) ಯಾವಾಗಲು ಸಹ ಕಾಂಗ್ರೆಸ್ (Congress) ಭದ್ರಕೋಟೆ. ವರುಣಾ ಕ್ಷೇತ್ರ ರಚನೆ ಆದಾಗಿನಿಂದಲೂ ಇಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿರೋದು. ಬಿಜೆಪಿಯಿಂದ ಯಾರೇ ಬಂದರೂ ನಮಗೆ ಭಯವಿಲ್ಲ. ಎಲ್ಲರೂ ಸಹ ಗೆಲ್ಲಬೇಕೆಂದು ಸ್ಟಾಟರ್ಜಿ ಮಾಡ್ತಾರೆ. ಅಂತಿಮವಾಗಿ ವರುಣಾ ಕ್ಷೇತ್ರದಲ್ಲಿ ನಾವೇ ಗೆಲ್ಲೋದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಪತ್ತೆ – ಆ್ಯಸಿಡ್ ಸುರಿದು ತಂದೆ, ತಾಯಿಯಿಂದ ಕೊಲೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k