BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

Public TV
1 Min Read
pavitra lokesh 1 1

ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ (Tollywood) ಇತ್ತೀಚೆಗೆ ಸಂಚಲನ ಮೂಡಿಸಿದ ವಿಚಾರ ಅಂದರೆ ಪವಿತ್ರಾ (Pavitra) ಮತ್ತು ನರೇಶ್ (Actor Naresh) ಲವ್ವಿ -ಡವ್ವಿ ವಿಚಾರ. ಇದೀಗ ಹೊಸ ವರ್ಷ ಬರುವಿಕೆಯ ಸಂಭ್ರಮದ ವೇಳೆ ತಮ್ಮ ಮದುವೆ ಬಗ್ಗೆ ಈ ಜೋಡಿ ಅನೌನ್ಸ್ ಮಾಡಿದ್ದಾರೆ.

pavitra lokesh 1 2

ಟಾಲಿವುಡ್ ನಟ ನರೇಶ್, ರಮ್ಯಾ ದಾಂಪತ್ಯ ಜೀವನದ ವಿಚಾರ ಬಗ್ಗೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಸಂಸಾರದ ಜಗಳ ಬೀದಿಗೆ ಬಂದು ಸದ್ದು ಮಾಡಿತ್ತು. ಪವಿತ್ರಾ ಲೋಕೇಶ್ (Pavitra Lokesh) ಮತ್ತು ನರೇಶ್ ರಿಲೇಷನ್‌ಶಿಪ್ ವಿಚಾರ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಎಲ್ಲಾ ವಿವಾದಕ್ಕೂ ಪವಿತ್ರಾ, ನರೇಶ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಪ್ತಪದಿ ತುಳಿಯಲು ಈ ಜೋಡಿ ಸಜ್ಜಾಗಿದ್ದಾರೆ.

ಕೇಕ್ ಕಟ್ ಮಾಡಿ, ಸಿಹಿ ಚುಂಬನ ನೀಡುವ ಮೂಲಕ ಯೆಸ್ ನಾವು ಮದುವೆಯಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟ ನರೇಶ್ ಅನೌನ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಹೊಸ ವರ್ಷ, ಹೊಸ ಹೆಜ್ಜೆ ನಿಮ್ಮ ಹಾರೈಕೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಮದುವೆ ಎಂದು ತಿಳಿಸಿದ್ದಾರೆ.

ಮದುವೆ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ನರೇಶ್, ಪವಿತ್ರಾಗೆ ಶುಭಹಾರೈಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *