Jawan ರಿಲೀಸ್‌ಗೆ ಕೌಂಟ್‌ಡೌನ್- 85 ಸಾವಿರ ಜನರಿಗಾಗಿ ಫ್ಯಾನ್ ಶೋ

Public TV
1 Min Read
Jawan 1

ಠಾಣ್ (Pathaan) ಸಕ್ಸಸ್ ನಂತರ ‘ಜವಾನ್’ (Jawan) ಆಗಿ ಶಾರುಖ್ ಖಾನ್ (Sharukh Khan) ಎಂಟ್ರಿ ಕೊಡ್ತಿದ್ದಾರೆ. ಇದೇ ಸೆ.7ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಜವಾನ್ ಮೂಲಕ ಹೊಸ ದಾಖಲೆ ಬರೆಯಲು ಶಾರುಖ್ & ಟೀಂ ಸಜ್ಜಾಗಿದ್ದಾರೆ. 85 ಸಾವಿರ ಮಂದಿಗಾಗಿ ಜವಾನ್ ಫ್ಯಾನ್ ಶೋ ಮಾಡಲು ಯೋಜನೆ ಮಾಡಲಾಗಿದೆ.‌ ಇದನ್ನೂ ಓದಿ:ತೆಲುಗಿನ ಬಿಗ್ ಬಾಸ್‌ಗೆ ಕನ್ನಡದ ನಟಿ ಕಿರಣ್ ರಾಥೋಡ್

Jawan 6

ಮುಂಬೈನ (Mumbai) ಐತಿಹಾಸಿಕ ಚಿತ್ರಮಂದಿರ ಗೈಟಿ ಗ್ಯಾಲಕ್ಸಿಯಲ್ಲಿ ಸೆ.7ರ ಬೆಳಿಗ್ಗೆ 6 ಗಂಟೆ ಪ್ರದರ್ಶನ ಶುರುವಾಗಿದೆ. ಶಾರುಖ್ ನಟನೆಯ ಸಿನಿಮಾದ ಬಿಡುಗಡೆಯನ್ನು ಆಚರಿಸಲು ಒಟ್ಟಿಗೆ 85 ಸಾವಿರಕ್ಕೂ ಅಧಿಕ ಜನ ಸೇರುತ್ತಿದ್ದಾರೆ. ಶಾರುಖ್ ಫ್ಯಾನ್ ಶೋ(Fans Show) ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಜವಾನ್‌ಗಾಗಿ ಭಾರತದ 300ಕ್ಕೂ ಹೆಚ್ಚು ನಗರಗಳಲ್ಲಿ ಫ್ಯಾನ್ ಶೋ ಆಯೋಜಿಸಿರೋದಾಗಿ ಹಿಂದಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

Jawan 1

ಅಟ್ಲೀ ನಿರ್ದೇಶನದಲ್ಲಿ ಮೊದಲ ಬಾರಿಗೆ ಶಾರುಖ್ ಖಾನ್- ನಯನತಾರಾ(Nayanatara), ವಿಜಯ್ ಸೇತುಪತಿ (Vijay Sethupathi) ಒಟ್ಟಿಗೆ ನಟಿಸಿದ್ದಾರೆ. ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಚಿತ್ರದ ಸಾಂಗ್, ಟ್ರೈಲರ್ ಎಲ್ಲವೂ ಪ್ರೇಕ್ಷಕರನ್ನ ಮೋಡಿ ಮಾಡ್ತಿದೆ.

ಪಠಾಣ್ ಸಿನಿಮಾದಂತೆ ‘ಜವಾನ್’ ಕೂಡ ಸಕ್ಸಸ್ ಆಗಲೇಬೇಕು ಅಂತಾ ಶಾರುಖ್ ಪಣ ತೊಟ್ಟಿದ್ದಾರೆ. ಇನ್ನೂ ಅಭಿಮಾನಿಗಳು ಕೂಡ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಳ್ಳುವ ಮೂಲಕ ಸಿನಿಮಾ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ.

Share This Article