ಬಜರಂಗಿ ಭಾಯಿಜಾನ್, ಫ್ಯಾಂಟಮ್, ಏಕ್ ಥಾ ಟೈಗರ್, ನ್ಯೂಯಾರ್ಕ್ ಮತ್ತು 83 ಎಂಬ ಹಿಟ್ ಸಿನಿಮಾಗಳನ್ನು ಕೊಟ್ಟ ಸ್ಟಾರ್ ಡೈರೆಕ್ಟರ್ ಕಬೀರ್ ಖಾನ್ ಸಿನಿಮಾರಂಗಕ್ಕೆ ಬಂದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್‍ಗಳು ಬರುತ್ತೀವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಬೀರ್, ನೆಗೆಟಿವ್ ಕಾಮೆಂಟ್‍ಗಳಿಗೆ ಪ್ರತಿಕ್ರಿಯೆಯನ್ನು ಕೊಡುತ್ತಿರಲಿಲ್ಲ. ಆದರೆ ಇದೇ ಮೊದಲಬಾರಿಗೆ ತಮ್ಮ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಮತ್ತು ಟ್ರೋಲ್‍ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Advertisement
ಸೋಶಿಯಲ್ ಮೀಡಿಯಾದಲ್ಲಿ ಕಬೀರ್ ಅವರಿಗೆ ನೆಟ್ಟಿಗರು ‘ನೀವು ಪಾಕಿಸ್ತಾನಕ್ಕೆ ಹೊರಟು ಹೋಗಿ’ ಎಂದು ಹೇಳುತ್ತಾ ಇರುತ್ತಾರೆ. ಇದಕ್ಕೆ ಎಂದೂ ಕಬೀರ್ ಉತ್ತರ ಕೊಟ್ಟಿರಲಿಲ್ಲ. ಆದರೆ ಶನಿವಾರ ಈ ಕುರಿತು ಮೌನ ಮುರಿದ ಅವರು, ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ನಡುವಿನ ವ್ಯತ್ಯಾಸದ ಬಗ್ಗೆ ಎಲ್ಲ ಟ್ರೋಲ್‍ಗಳಿಗೆ ತಿಳಿಸಿದ್ದು, ನೆಗೆಟಿವ್ ಕಾಮೆಂಟ್‍ಗಳಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಹೃತಿಕ್, ಸಬಾ ಲವ್ ಸ್ಟೋರಿ ರಿವೀಲ್
Advertisement
Advertisement
ಎಬಿಪಿ ಸಮ್ಮೇಳನದಲ್ಲಿ ಮಾತನಾಡಿದ ಕಬೀರ್, ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಹೆಚ್ಚು ನೆಗೆಟಿವಿಟಿ ಹರಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವಿಟಿಗಿಂತ ನೆಗೆಟಿವಿಟಿಯೇ ಹೆಚ್ಚು. ನನ್ನ ಹೆಸರಲ್ಲಿ ಖಾನ್ ಇದೆ ಎಂಬ ಕಾರಣಕ್ಕೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಅನೇಕರು ಕಾಮೆಂಟ್ ಮಾಡುತ್ತಾ ಇರುತ್ತಾರೆ. ಇದರಿಂದ ಬೇಸರಗೊಂಡು ನಾನು ಒಂದು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದೆ. ಅಲ್ಲಿ ಲಷ್ಕರ್ ಸಂಘಟನೆ ನನಗೆ ಭಾರತಕ್ಕೆ ಹಿಂತಿರುಗುವಂತೆ ತಿಳಿಸಿತ್ತು. ಹಾಗಾಗಿ ನಾನು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ ಎಂಬಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಪ್ರತಿಯೊಬ್ಬ ಸಿನಿಮಾ ಮೇಕರ್‌ಗಳು ತಾವು ಮಾಡುವ ಸಿನಿಮಾದಲ್ಲಿ ತಮ್ಮದೇ ಆದ ಆಲೋಚನೆಗಳನ್ನು ತೋರಿಸಬೇಕು ಎಂದು ಆಶಿಸುತ್ತಾರೆ. ನಾವು ಕೆಲವೊಮ್ಮೆ ಸಿನಿಮಾದಲ್ಲಿ ತ್ರಿವರ್ಣ ಧ್ವಜವನ್ನು ತೋರಿಸುತ್ತೇವೆ. ಇದು ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಎರಡೂ ಒಂದೇ ಅಲ್ಲ. ಎರಡರ ನಡುವೆ ವ್ಯತ್ಯಾಸವಿದೆ ಎಂದು ವಿವರಿಸಿದ್ದಾರೆ.
ತಮ್ಮ ನಿರ್ದೇಶನದ ’83’ ಸಿನಿಮಾವನ್ನು ಉದಾಹರಣೆಯಾಗಿ ನೀಡುತ್ತ ಮಾತನಾಡಿದ ಅವರು, ರಾಷ್ಟ್ರೀಯತೆಗೆ, ಕೆಲವೊಮ್ಮೆ ನಮಗೆ ಕೌಂಟರ್ ಪಾಯಿಂಟ್ ಅಥವಾ ಖಳನಾಯಕನ ಅಗತ್ಯವಿರುತ್ತದೆ. ದೇಶಪ್ರೇಮಕ್ಕಾಗಿ ನಿಮಗೆ ಅಂತಹ ಯಾವುದೇ ವಿಷಯ ಬೇಕಾಗಿಲ್ಲ. ದೇಶಪ್ರೇಮವು ನಿಮ್ಮ ದೇಶಕ್ಕಾಗಿ ನೀವು ತೋರಿಸುವ ಶುದ್ಧ ಪ್ರೀತಿಯಾಗಿದೆ. ನಿಮಗೆ ಬೇರೆ ಯಾವುದೇ ಅಗತ್ಯವಿರುವುದಿಲ್ಲ. ಅದು ನನ್ನ ಪ್ರಯತ್ನವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್
ಕಬೀರ್ ಆಕ್ಷನ್ ಕಟ್‍ನಲ್ಲಿ ಮೂಡಿ ಬಂದ 83 ಸಿನಿಮಾದಲ್ಲಿ ರಣಬೀರ್ ಸಿಂಗ್ ನಟಿಸಿದ್ದರು. ಈ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿದೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಘಟನೆಯನ್ನು ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟ ಖ್ಯಾತಿ ಕಬೀರ್ ಅವರಿಗೆ ಸಲ್ಲಿಕೆ ಆಗುತ್ತೆ. ಈ ಸಿನಿಮಾ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಿತ್ತು. ಇತ್ತೀಚೆಗೆ ಈ ಚಿತ್ರ ಓಟಿಟಿಯಲ್ಲಿಯೂ ಕಾಣಿಸಿಕೊಂಡಿದೆ. ’83’ ಕ್ಲಾಸಿಕ್ ಸಿನಿಮಾ. ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾಗೆ ಭಾರೀ ಬೇಡಿಕೆ ಇತ್ತು. ಆದರೆ, ಕೋವಿಡ್ ಕಾರಣದಿಂದ ಅನೇಕರು ಚಿತ್ರಮಂದಿರದತ್ತ ಮುಖ ಮಾಡಿರಲಿಲ್ಲ. ವಿಶೇಷ ಎಂದರೆ ಎರಡು ಓಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಈ ಚಿತ್ರ ರಿಲೀಸ್ ಆಗಿದೆ.