ಚಂದನವನದ ಸೂಕ್ಷ್ಮ ಮನಸ್ಸಿನ ವ್ಯಕ್ತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಿನಿರಸಿಕರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಮೊದಲ ಸಿನಿಮಾದಲ್ಲೇ ಸಾಮಾಜಿಕ ಕಳಕಳಿ ಮೂಡಿಸಿ, ರಾಷ್ಟ್ರಮಟ್ಟದಲ್ಲಿ ಗೆದ್ದುಬಂದಿದ್ದರು. ಈ ನಟ ಹೆಚ್ಚು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿದ್ದರಿಂದ ಅವರ ಬಗ್ಗೆ ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಅಭಿಮಾನಿಗಳು ಇದ್ದಾರೆ. ವಿಜಯ್ ಅವರು ದೈಹಿಕವಾಗಿ ಇಲ್ಲದಿದ್ದರೂ, ಅವರು ಮಾಡಿರುವ ಪಾತ್ರಗಳ ಬಗ್ಗೆ ಸಿನಿರಸಿಕರು ನೆನಪಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟಿ ಸಂಚಾರಿ ವಿಜಯ್ ಅವರ ‘ತಲೆತಂಡ’ ಸಿನಿಮಾವನ್ನು ನೆನೆದು, ಅವರನ್ನು ಹಾಡಿ ಹೊಗಲಿದ್ದಾರೆ.
Advertisement
ಹೀರೋ ಎಂದರೆ ಕಮರ್ಷಿಯಲ್ ಸಿನಿಮಾಗಳನ್ನೆ ಹೆಚ್ಚು ಮಾಡಬೇಕು ಎನ್ನುವ ಕಾಸ್ಸೆಪ್ಟ್ ಇಟ್ಟುಕೊಳ್ಳದೆ ಸಮಾಜಕ್ಕೆ ಸಂದೇಶ ಸಾರುವ ಪಾತ್ರಗಳನ್ನೆ ವಿಜಯ್ ಹೆಚ್ಚು ಮಾಡಿದ್ದಾರೆ. ಭಿನ್ನ ವ್ಯಕ್ತಿತ್ವ ಹೊಂದಿದ್ದ ಸಂಚಾರಿ ವಿಜಯ್ ಮೂಲತಃ ರಂಗಭೂಮಿ ಕಲಾವಿದ. ಶಿಸ್ತಿನ ಮಾತು, ನಡೆ, ನುಡಿಯಿಂದ ಚಿತ್ರರಂಗದಲ್ಲಿ ಭಿನ್ನ ಛಾಪು ಮೂಡಿಸಿದ ನಟ ಇವರು. ಈ ಹಿನ್ನೆಲೆ ಅವರು ಮಾಡಿದ್ದು ಕಡಿಮೆ ಸಿನಿಮಾವಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆ ವಿಜಯ್ ಕುರಿತು ಮಮ್ಮುಟ್ಟಿ ಮೆಚ್ಚುಗೆಯ ಮಾತುಗಳನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಈ ಪೋಸ್ಟ್‌ನಲ್ಲಿ ಅವರು ‘ತಲೆತಂಡ’ ಸಿನಿಮಾ ಪೋಸ್ಟರ್ ಪೋಸ್ಟ್ ಮಾಡಿದ್ದು, ನಾನು ಸಂಚಾರಿ ವಿಜಯ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ ಇದ್ದೆ. ಅವರು ಪ್ರಸ್ತುತ ನಮ್ಮ ಜೊತೆ ಇಲ್ಲ ಎಂಬುದನ್ನು ನಾನು ನಂಬುವುದಿಲ್ಲ. ನಾವಿಬ್ಬರು ಹೈದರಾಬಾದ್‍ನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೆವು. ಈ ವೇಳೆ ಅವರು ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದರು. ಅದನ್ನು ಕೇಳಿಸಿಕೊಂಡು ನಾನು ಧನ್ಯವಾಗಿದ್ದೆ. ಈ ವೇಳೆ ಅವರು ನನಗೆ ‘ತಲೆದಂಡ’ ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿ ಎಂದಿದ್ದರು. ಆದರೆ ಇದೇ ಅವರ ಕೊನೆ ಸಿನಿಮಾವಾಗುತ್ತೆ ಎಂದು ಯಾರಿಗೆ ಗೊತ್ತಿತ್ತು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಮ್ಮ ಮನೆಯ ಮುದ್ದು ಸದಸ್ಯನನ್ನು ಪರಿಚಯ ಮಾಡಿಸಿದ ಹರಿಪ್ರಿಯಾ
Advertisement
ಚಿತ್ರಮಂದಿರದಲ್ಲಿ ವಿಜಯ್ ಅವರ ಸಿನಿಮಾ ನೋಡುವುದರ ಮೂಲಕ ಸವಿ ನೆನಪುಗಳನ್ನು ಸಂಭ್ರಮಿಸೋಣ. ಅವರ ಹಾರ್ಡ್ ವರ್ಕ್ ಹಾಗೂ ಪ್ರತಿಭೆಯನ್ನು ನಾವೆಷ್ಟು ಪ್ರೀತಿಸಿದ್ದೇವೆ ಎನ್ನುವುದನ್ನು ತಿಳಿಯಲು ಅವರು ಕಾಯುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.