ಮುಂಬೈ: 80 ವರ್ಷದ ವೃದ್ಧನೊಬ್ಬ 8 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.
ಆರೋಪಿ ವೃದ್ಧನನ್ನು ಈಗ ಪೊಲೀಸರು ಬಂಧಿಸಿದ್ದು, ಆರೋಪಿ ಒಬ್ಬನೇ ವಾಸಿಸುತ್ತಿದ್ದನು. ನೆರೆಹೊರೆಯವರೇ ಆತನಿಗೆ ಆಹಾರವನ್ನು ನೀಡುತ್ತಿದ್ದರು. ಸಂತ್ರಸ್ತ ಬಾಲಕಿ ಇಂಗ್ಲಿಷ್ ಕಲಿಕೆಯನ್ನು ಆರಂಭಿಸಿದ ಒಂದು ದಿನ ನಂತರ ಬಾಲಕಿ ತಾಯಿಗೆ ಹೇಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
Advertisement
ಸಂತ್ರಸ್ತೆ ಇಂಗ್ಲಿಷ್ನಲ್ಲಿ ಆರೋಪಿಯನ್ನು ಬ್ಯಾಡ್ ಮ್ಯಾನ್ ಎಂದು ಹೇಳಿದ್ದಾಳೆ. ಆಗ ತಾಯಿಗೆ ಅನುಮಾನ ಬಂದು ಯಾಕೆ ಬ್ಯಾಡ್ ಮ್ಯಾನ್ ಎಂದು ಕರೆದೆ ಎಂದು ಪ್ರಶ್ನಿಸಿದ್ದಾರೆ. ಆಗ ಬಾಲಕಿ ಒಂದು ದಿನ ಆತನಿಗೆ ಊಟ ಕೊಟ್ಟು ಪ್ಲೇಟ್ ತೆಗೆದುಕೊಂಡು ಹಿಂದಿರುಗುತ್ತಿದ್ದಾಗ ತನ್ನ ಮನೆಗೆ ಕರೆದುಕೊಂಡು ಹೋದನು. ನಂತರ ಅತ್ಯಾಚಾರ ಮಾಡಿ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಾನು ನಿನ್ನ ಪೋಷಕರ ಮೇಲೆ ಹಲ್ಲೆ ಮಾಡುತ್ತೇನೆ ಅಂತಾ ಹೆದರಿಸಿದ್ದನು ಎಂದು ತಾಯಿಗೆ ವಿವರಿಸಿದ್ದಾಳೆ.
Advertisement
Advertisement
ತಾಯಿ ಈ ವಿಚಾರ ತಿಳಿದ ಮೇಲೆ ಬಾಲಕಿಯನ್ನು ಕೆ.ಎಂ.ಇ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಆಗ ರಿಪೋರ್ಟ್ನಲ್ಲಿ ಅತ್ಯಾಚಾರ ನಡೆದಿರುವುದಾಗಿ ಬಂದಿದೆ. ಬಳಿಕ ತಾಯಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ತಾಯಿಯ ದೂರು ಆಧರಿಸಿ ಆರೋಪಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಬನ್ಸೋಡ್ ಹೇಳಿದ್ದಾರೆ.