Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರು, 80% ಆದಾಯ ಚಾಲಕರಿಗೆ: ಅಮಿತ್‌ ಶಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರು, 80% ಆದಾಯ ಚಾಲಕರಿಗೆ: ಅಮಿತ್‌ ಶಾ

Latest

ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರು, 80% ಆದಾಯ ಚಾಲಕರಿಗೆ: ಅಮಿತ್‌ ಶಾ

Public TV
Last updated: February 23, 2026 3:04 pm
Public TV
Share
2 Min Read
AMITSHAH 3
SHARE

– ಚಾಲಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಭರವಸೆ ನೀಡಿದ ಕೇಂದ್ರ ಗೃಹ ಸಚಿವ

ನವದೆಹಲಿ: ಕಷ್ಟಪಟ್ಟು ದುಡಿಯುವವನಿಗೆ ಲಾಭ ಸಿಗಬೇಕು. ಆ್ಯಪ್ ತಯಾರಿಸಿದ ಶ್ರೀಮಂತರಿಗಲ್ಲ ಎಂಬುದು ಭಾರತ್ ಟ್ಯಾಕ್ಸಿಯ (Bharat Taxi) ಪರಿಕಲ್ಪನೆ. ಇಲ್ಲಿ ಚಾಲಕರೇ ಮಾಲೀಕರಾಗಿದ್ದು, 80% ಹಣ ಚಾಲಕರಿಗೆ ಸಂದಾಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

ಭಾರತ್ ಟ್ಯಾಕ್ಸಿ ಚಾಲಕರೊಂದಿಗೆ ದೆಹಲಿಯಲ್ಲಿ ಸಂವಾದ ನಡೆಸಿದ ಅವರು, ಈ ಸಹಕಾರಿ ಆಧಾರಿತ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ನ ಮೂಲಕ ಚಾಲಕರ ಯೋಗಕ್ಷೇಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ; ತನಿಖೆ ಚುರುಕು

ಫೆಬ್ರವರಿ 5 ರಂದು ಪ್ರಾರಂಭವಾದ ಭಾರತ್ ಟ್ಯಾಕ್ಸಿ ಭಾರತದ ಮೊದಲ ಸಹಕಾರಿ ರೈಡ್-ಹೇಲಿಂಗ್ ಸೇವೆಯಾಗಿದ್ದು, ಸರ್ಕಾರದ ಬೆಂಬಲದೊಂದಿಗೆ ಅಮೂಲ್, ಐಎಫ್‌ಸಿಒ ಮತ್ತು ನಾಬಾರ್ಡ್ ಸಂಸ್ಥೆಗಳ ಸಹಯೋಗದಿಂದ ಕಾರ್ಯನಿರ್ವಹಿಸುತ್ತದೆ. ಇತರ ಖಾಸಗಿ ಆ್ಯಪ್‌ಗಳಂತಲ್ಲದೆ, ಇದು ಚಾಲಕರೇ ಮಾಲೀಕರಾಗಿರುವ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಕೆಲಸ ಮಾಡುವವರಿಗೇ ಹೆಚ್ಚಿನ ಲಾಭ ತಲುಪುತ್ತದೆ ಎಂದಿದ್ದಾರೆ.

ಭಾರತ್‌ ಟ್ಯಾಕ್ಸಿಯಲ್ಲಿ 80% ಆದಾಯ ಅಥವಾ ಲಾಭ ನೇರವಾಗಿ ಚಾಲಕರಿಗೆ ತಲುಪುತ್ತದೆ. ಇಲ್ಲಿ ಯಾವುದೇ ಕಮಿಷನ್ ಇಲ್ಲ. ಕೇವಲ ಕನಿಷ್ಠ ಸದಸ್ಯತ್ವ ಶುಲ್ಕ ಮಾತ್ರ. ಸರ್ಜ್ ಪ್ರೈಸಿಂಗ್ ಇಲ್ಲ, ದರಗಳು ಸ್ಪಷ್ಟವಾಗಿರುತ್ತವೆ. ಚಾಲಕರು 500 ರೂ. ಮಾತ್ರ ಹೂಡಿಕೆ ಮಾಡಿ ಈ ಸಹಕಾರದ ಭಾಗವಾಗಬಹುದು ಎಂದು ತಿಳಿಸಿದ್ದಾರೆ.

Bharat

ಉದಾಹರಣೆಗೆ, ಭಾರತ್ ಟ್ಯಾಕ್ಸಿ 25 ಕೋಟಿ ರೂ. ಗಳಿಸಿದರೆ, 20% ಕಂಪನಿಯ ಖಾತೆಗೆ (ಚಾಲಕರೇ ಮಾಲೀಕರಾದ್ದರಿಂದ ಅದೂ ಚಾಲಕರ ಭಾಗವೇ) ಹೋಗುತ್ತದೆ. ಉಳಿದ 80% ಚಾಲಕರ ಕಾರ್ಯಾಚರಣೆಗಳ ಆಧಾರದ ಮೇಲೆ (ಉದಾ. ಚಾಲನೆ ಮಾಡಿದ ಕಿ.ಮೀ.) ವಿತರಣೆಯಾಗುತ್ತದೆ. ಇದರಿಂದ ಚಾಲಕರು ಕೇವಲ ಕೂಲಿಯಲ್ಲದೆ ಲಾಭದ ಭಾಗವನ್ನೂ ಪಡೆಯುತ್ತಾರೆ ಎಂದು ಶಾ ವಿವರಿಸಿದರು.

ಹಿಂದೆ ಖಾಸಗಿ ಕಂಪನಿಗಳಲ್ಲಿ ನಿಮ್ಮ ಆದಾಯದ ದೊಡ್ಡ ಭಾಗ ಆ್ಯಪ್ ಮಾಲೀಕರ ಜೇಬಿಗೆ ಹೋಗುತ್ತಿತ್ತು. ಭಾರತ್ ಟ್ಯಾಕ್ಸಿಯಲ್ಲಿ ನೀವೇ ಮಾಲೀಕರು. ಕಷ್ಟಪಟ್ಟು ಕೆಲಸ ಮಾಡುವವನಿಗೆ ಲಾಭ ಸಿಗಬೇಕು, ಮೊದಲ ಮೂರು ವರ್ಷಗಳಲ್ಲಿ ಪ್ಲಾಟ್‌ಫಾರ್ಮ್ ಬೆಳೆಯಲು ಸಮಯ ಬೇಕು ಚಾಲಕರು ತಾಳ್ಮೆಯಿಂದರಬೇಕು. ಮುಂದೆ ಇದು ದೇಶದ ಹಲವು ರಾಜ್ಯಗಳಿಗೆ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಖಾತೆಗಳು ಪಾರದರ್ಶಕವಾಗಿರುತ್ತವೆ ಮತ್ತು ಚಾಲಕರಿಗೆ ಲಭ್ಯವಿರುತ್ತವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನಾಳೆಯಿಂದ ಸುಂಕ ಸಂಗ್ರಹ ನಿಲ್ಲಿಸಲಿದೆ ಅಮೆರಿಕ – 175 ಶತಕೋಟಿ ಡಾಲರ್‌ ನಷ್ಟದ ಆತಂಕ

ಭಾರತ್ ಟ್ಯಾಕ್ಸಿ ಸಹಕಾರಿ ತತ್ವಗಳ ಮೇಲೆ ಕಾರ್ಯನಿರ್ವಹಿಸುವುದರಿಂದ ಚಾಲಕರನ್ನು ಶೋಷಣೆ ಮಾಡುವುದಿಲ್ಲ ಎಂದು ಅಮಿತ್ ಶಾ ಒತ್ತಿ ಹೇಳಿದರು. ಇದು ಅಮೂಲ್ ಮಾದರಿಯಂತೆ ಚಾಲಕರನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

TAGGED:Amit ShahBharat Taxiಅಮಿತ್ ಶಾಭಾರತ್‌ ಟ್ಯಾಕ್ಸಿ
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

Siddaramaiah 5
Bengaluru City

ಆಪ್ತ ಸಚಿವರಿಗೆ ಸಿದ್ದರಾಮಯ್ಯ ಇಂದು ಡಿನ್ನರ್ ಪಾರ್ಟಿ – ಕುರ್ಚಿ ಕದನಕ್ಕೆ ಟ್ವಿಸ್ಟ್‌ ಕೊಡ್ತಾರಾ ಸಿಎಂ?

Public TV
By Public TV
8 minutes ago
Cylinder Shortage Mudigere School
Chikkamagaluru

ಶಾಲೆ ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್‌ ಅಭಾವದ ಬಿಸಿ – ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ

Public TV
By Public TV
31 minutes ago
LPG
Bengaluru City

ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ – ಹೋಟೆಲ್ ಉದ್ಯಮಕ್ಕೆ ಮತ್ತೆ ಸರ್ಕಾರ ಶಾಕ್

Public TV
By Public TV
37 minutes ago
Shivalik Ship
Latest

ಕೊಲ್ಲಿ ಯುದ್ಧದ ನಡುವೆ ಭಾರತಕ್ಕೆ 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ತಂದ ಶಿವಾಲಿಕ್‌ ಹಡಗು

Public TV
By Public TV
1 hour ago
gas tanker udupi
Latest

ಉಡುಪಿ ಕಟಪಾಡಿಯಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್

Public TV
By Public TV
1 hour ago
petrol machine
Latest

ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ನೇಪಾಳದಲ್ಲೀಗ ಲೀಟರ್‌ ಪೆಟ್ರೋಲ್‌ಗೆ 188 ರೂ., ಡೀಸೆಲ್‌ಗೆ 196 ರೂ.

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?