ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಖರೀದಿಸಿದ ಬಳಿಕ ಅದರ ಉದ್ಯೋಗಿಗಳ (Employees) ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಪ್ರಾರಂಭಿಸಿದ್ದಾರೆ. ಕಂಪನಿಯ ಹೆಚ್ಚುವರಿ ಉದ್ಯೋಗಿಗಳನ್ನು ಕಡಿತಗೊಳಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಕಂಪನಿಯನ್ನು ಇನ್ನಷ್ಟು ಲಾಭದಾಯಕಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಸ್ಕ್ ಮಾಡುತ್ತಿದ್ದಾರೆ.
ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ 2 ವಾರಗಳೊಳಗೆ ಕಂಪನಿಯ ಅರ್ಧದಷ್ಟು ಉದ್ಯೋಗಿಗನ್ನು ವಜಾಗೊಳಿಸಿದ್ದಾರೆ (Layoff). ಅದರಲ್ಲೂ ಹೆಚ್ಚಾಗಿ ಉನ್ನತ ಕಾರ್ಯನಿರ್ವಾಹಕರನ್ನೇ ಹೊರದಬ್ಬಿದ್ದಾರೆ. ಇದರೊಂದಿಗೆ ಉದ್ಯೋಗಳು ಇನ್ನು ಮನೆಯಿಂದ ಕೆಲಸ ಮಾಡುವುದನ್ನು ಬಿಟ್ಟು, ಕಚೇರಿಗೆ ಮರಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.
Advertisement
Advertisement
ಮಸ್ಕ್ ತನ್ನ ಉದ್ಯೋಗಿಗಳಿಗೆ ಹೊಸ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ಅದರಲ್ಲಿ ತನ್ನ ಉದ್ಯೋಗಿಗಳು ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು. ಕಂಪನಿಯಲ್ಲಿ ಸಿಗುವ ಉಚಿತ ಆಹಾರವನ್ನು ಕಡಿತಗೊಳಿಸಲಾಗುವುದು ಮಾತ್ರವಲ್ಲದೇ ಇನ್ನು ಕೂಡಾ ವರ್ಕ್ ಫ್ರಂ ಹೋಂ (WFH) ಮಾಡುತ್ತಿರುವವರು ಕಡ್ಡಾಯವಾಗಿ ಕಚೇರಿಗೆ ಮರಳುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ
Advertisement
Advertisement
ಇನ್ನು ಮುಂದೆ ಉದ್ಯೋಗಿಗಳು ಕಂಪನಿಗಾಗಿ ಹೆಚ್ಚು ಶ್ರಮವಹಿಸಬೇಕು. ಕೊರೊನಾ ಕಳೆದಿದ್ದು, ಇನ್ನು ಕೂಡಾ ಕಂಪನಿಗೆ ಮರಳಲು ಬಯಸದೇ ಮನೆಯಲ್ಲೇ ಕೆಲಸ ಮಾಡುತ್ತಿರುವವರು ಕಂಪನಿಯನ್ನೇ ತೊರೆದಿರುವಂತೆ ಪರಿಗಣಿಸಲಾಗುವುದು ಎಂದು ಮಸ್ಕ್ ಉದ್ಯೋಗಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸ್ತೀವಿ – ಕೇಜ್ರಿವಾಲ್ ಭರವಸೆ