CricketLatestMain PostSports

ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

ಮುಂಬೈ: 140 ಕೋಟಿ ಭಾರತೀಯರ ಟಿ20 ವಿಶ್ವಕಪ್ (T20 World Cup) ಗೆಲುವಿನ ಕನಸು ನಿನ್ನೆ ಭಾರತ (India), ಇಂಗ್ಲೆಂಡ್ (England) ವಿರುದ್ಧ ಸೋಲುವುದರೊಂದಿಗೆ ಕೊನೆಗೊಂಡಿದೆ. ಈ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಪರ್ಫಾಮೆನ್ಸ್ ಕಂಡು ಅಭಿಮಾನಿಗಳು ಕಿಡಿಕಾರಿದ್ದಾರೆ.

ಐಪಿಎಲ್‍ನ (IPL) ಯಶಸ್ವಿ ನಾಯಕ ಈ ಬಾರಿ ಐಸಿಸಿ ಟ್ರೋಫಿ ಗೆದ್ದು ಭಾರತಕ್ಕೆ ಮತ್ತೊಂದು ಟಿ20 ವಿಶ್ವಕಪ್ ತಂದುಕೊಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ ಭಾರತ ಸೆಮಿಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡು ಬರಿಗೈಯಲ್ಲಿ ಮರಳುವಂತಾಗಿದೆ. ಇದೀಗ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಕುರಿತಾಗಿ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ ಪ್ರದರ್ಶನ ಕಂಡಿರುವ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್ ಸೋಲಿನ ಬಳಿಕ ದ್ರಾವಿಡ್‌ಗೆ ವಿಶ್ರಾಂತಿ – ಲಕ್ಷ್ಮಣ್‌ ಕೋಚ್

ಟೂರ್ನಿಯುದ್ದಕ್ಕೂ ಬ್ಯಾಟಿಂಗ್‍ನಲ್ಲಿ ಫ್ಲಾಪ್‌ ಶೋ ಮುಂದುವರಿಸಿದ್ದ ರೋಹಿತ್, ಸೆಮಿಫೈನಲ್ ಪಂದ್ಯದಲ್ಲಾದರೂ ಅಬ್ಬರಿಸುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಇಲ್ಲೂ ಕೂಡ ರೋಹಿತ್ ವಿಫಲರಾದರು. ಮಹತ್ವದ ಪಂದ್ಯದಲ್ಲಿ ರೋಹಿತ್ ಬ್ಯಾಟಿಂಗ್‍ನಲ್ಲಿ ಹರಿದು ಬಂದ ರನ್ 27 ಅದಕ್ಕಾಗಿ ಎದುರಿಸಿದ್ದು 28 ಎಸೆತ, ಹೊಡೆದದ್ದು 4 ಬೌಂಡರಿ ಮಾತ್ರ. ಈ ಆಮೆಗತಿಯ ಬ್ಯಾಟಿಂಗ್‍ನಿಂದಾಗಿ ಪವರ್ ಪ್ಲೇನಲ್ಲಿ ರನ್ ಬರಲಿಲ್ಲ. ಹೀಗಾಗಿ ಭಾರತಕ್ಕೆ ಹಿನ್ನಡೆಯಾಯಿತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ರೋಹಿತ್ ಶರ್ಮಾ ಆರಂಭಿಕರಾಗಿ ಬಂದು ಅಬ್ಬರಿಸುತ್ತಿದ್ದ ಈ ಹಿಂದಿನ ಲಯ ಕ್ಯಾಪ್ಟನ್ ಆದ ಬಳಿಕ ಕಂಡುಬರುತ್ತಿಲ್ಲ. ರನ್ ಗಳಿಸಲು ರೋಹಿತ್ ಒದ್ದಾಡುತ್ತಿದ್ದಾರೆ. ಟಿ20 ವಿಶ್ವಕಪ್‍ನಲ್ಲಿ ಒಟ್ಟು 6 ಪಂದ್ಯಗಳಿಂದ ರೋಹಿತ್ ಬ್ಯಾಟ್‍ನಿಂದ ಸಿಡಿದಿದ್ದು ಕೇವಲ 116 ರನ್. ಸ್ಟ್ರೈಕ್‍ರೇಟ್ 106.42 ಈ 6 ಇನ್ನಿಂಗ್ಸ್‌ನಲ್ಲಿ ಒಂದು ಅರ್ಧಶತಕ ಮಾತ್ರ ಸಿಡಿಸಲು ರೋಹಿತ್ ಸಫಲರಾಗಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೆಲುವು ಸಂಭ್ರಮಿಸಿದ ಕಿಡಿಗೇಡಿಗಳು – ನಾಲ್ವರು ವಶಕ್ಕೆ

ಪಾಕಿಸ್ತಾನ ವಿರುದ್ಧ 4 ರನ್ (7 ಎಸೆತ), ನೆದರ್‌ಲ್ಯಾಂಡ್‌ ವಿರುದ್ಧ 53 ರನ್ (39 ಎಸೆತ), ದಕ್ಷಿಣ ಅಫ್ರಿಕಾ ವಿರುದ್ಧ 15 ರನ್ (14 ಎಸೆತ), ಬಾಂಗ್ಲಾದೇಶ ವಿರುದ್ಧ 2 ರನ್ (8 ಎಸೆತ), ಜಿಂಬಾಬ್ವೆ ವಿರುದ್ಧ 15 ರನ್ (13 ಎಸೆತ), ಇಂಗ್ಲೆಂಡ್ ವಿರುದ್ಧ 27 ರನ್ (28 ಎಸೆತ) ಈ ಪ್ರದರ್ಶನ ನೋಡಿದಾಗ ರೋಹಿತ್ ಶರ್ಮಾ ಬ್ಯಾಟಿಂಗ್‍ನಲ್ಲಿ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಮಾಜಿ ಆಟಗಾರರು ಸಹಿತ ಕ್ರಿಕೆಟ್ ಪಂಡಿತರು ರೋಹಿತ್ ನಾಯಕತ್ವದಿಂದಾಗಿ ಈ ರೀತಿ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್‍ಗೆ ನಾಯಕತ್ವ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

Live Tv

Leave a Reply

Your email address will not be published. Required fields are marked *

Back to top button