ಬೆಂಗಳೂರು: 80 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಾಷ, ಮಹಮ್ಮದ್ ಮುನ್ನಾ, ಸಂತೋಷ್, ಜಗನ್ನಾಥಚರ್ ಬಂಧಿತ ಆರೋಪಿಗಳು. ನಗರದ ಬಗಲಗುಂಟೆ ಸಮೀಪ ನಾಲ್ವರು ಆರೋಪಿಗಳು 80.ಕೋಟಿ ಮೌಲ್ಯದ ತಿಮಿಂಗಿಲ ವಾಂತಿ(ಅಂಬರ್ ಗ್ರಿಸ್ ಗಟ್ಟಿ) ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮರ್ಕ್ಯೂರಿ ತಾಮ್ರದ ಬಾಟಲ್ ಗಳನ್ನು ಮಾರಾಟಕ್ಕೆ ಮುಂದಾಗಿದ್ದರು.
ಈ ವೇಳೆ ಖಚಿತ ಮಾಹಿತಿ ಆಧಾರಿಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪರೂಪದ ಅಂಬರ್ ಗ್ರಿಸ್ ಮತ್ತು ಪುರಾತನ ಕಾಲದ ಮರ್ಕ್ಯೂರಿ ತಾಮ್ರದ ಬಾಟಲ್, ಈಸ್ಟ್ ಇಂಡಿಯಾ ಕಂಪನಿಯ ಪುರಾತನ ಸ್ಟೀಮ್ ಫ್ಯಾನ್ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಏನಿದು ತಿಮಿಂಗಿಲ ವಾಂತಿ? ವಿಶೇಷತೆ ಏನು?
ಇನ್ನೂ ಅಂಬರ್ ಗ್ರಿಸ್ ಗೆ ವಿದೇಶದಲ್ಲಿ ಬಾರಿ ಬೇಡಿಕೆಯಿದ್ದು, ಸುಗಂಧ ದ್ರವ್ಯಕ್ಕೆ ಇದನ್ನು ಉಪಯೋಗ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಅಂಬರ್ ಗ್ರಿಸ್ ಒಂದು ಕೆಜಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಬೆಲೆ ಇದೆ ಎನ್ನಲಾಗಿದೆ. ಸದ್ಯ ಈ ನಾಲ್ವರು ಆರೋಪಿಗಳಿಗೆ ಇಷ್ಟು ಅಮೂಲ್ಯವಾದ ವಸ್ತುಗಳು ಸಿಕ್ಕಿದಾದಾದರೂ ಹೇಗೆ ಎನ್ನುವುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.