ಮುಂಬೈ: ಮಹಾರಾಷ್ಟ್ರ (Maharashtra) ರಾಜಧಾನಿ ಮುಂಬೈನಲ್ಲಿ (Mumbai) ಬುಧವಾರ 8 ತಿಂಗಳ ಮಗು ದಡಾರದಿಂದ (Measles) ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 12 ಕ್ಕೆ ಏರಿಕೆಯಾಗಿದೆ. ನೆರೆ ರಾಜ್ಯದಲ್ಲಿ ದಡಾರದಿಂದ ಸಾವುಗಳಾಗುತ್ತಿದ್ದು, ಕರ್ನಾಟಕದಲ್ಲಿ (Karnataka) ಆತಂಕ ಮೂಡಿಸಿದೆ.
ದಿನದ ಹಿಂದೆಯಷ್ಟೇ ಒಂದು ವರ್ಷದ ಮಗು ಸಾವನ್ನಪ್ಪಿತ್ತು ಎಂದು ನಗರದ ನಾಗರಿಕ ಸಂಸ್ಥೆ ತಿಳಿಸಿದೆ. ಮಹಾರಾಷ್ಟ್ರ ಆರೋಗ್ಯ ಸಚಿವ ಡಾ. ತಾನಾಜಿ ಸಾವಂತ್ ಮಂಗಳವಾರ ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ದಡಾರ ಕುರಿತು ಮಾಹಿತಿ ಪಡೆದರು. ಇದನ್ನೂ ಓದಿ: ತೆಲಂಗಾಣದ ಬಸ್ ನಿಲ್ದಾಣದ ಬಳಿ ದೇಸೀ ಬಾಂಬ್ ಸ್ಫೋಟ
Advertisement
Advertisement
ಮುಂಬೈ ಮಾತ್ರವಲ್ಲದೇ ಜಾರ್ಖಂಡ್‌ನ ರಾಂಚಿ, ಗುಜರಾತ್‌ನ ಅಹಮದಾಬಾದ್ ಮತ್ತು ಕೇರಳದ ಮಲಪ್ಪುರಂನಲ್ಲಿಯೂ ಮಕ್ಕಳಲ್ಲಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ.
Advertisement
Advertisement
ದಡಾರ ಪ್ರಕರಣಗಳ ಹೆಚ್ಚುತ್ತಿರುವ ಕುರಿತು ತಂಡಗಳು ತನಿಖೆ ನಡೆಸಲಿವೆ. ಅಲ್ಲದೇ ದಡಾರ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮ ಹಾಗೂ ಮುಂಜಾಗ್ರತೆ ಕುರಿತು ಅರಿವು ಮೂಡಿಸಲಿವೆ ಎಂದು ರಾಜ್ಯ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಅಫ್ತಾಬ್ ನನ್ನನ್ನು ಕೊಂದು ಪೀಸ್ ಪೀಸ್ ಮಾಡ್ತಾನೆ – 2 ವರ್ಷದ ಹಿಂದೆಯೇ ಪೊಲೀಸರಿಗೆ ಪತ್ರ ಬರೆದಿದ್ದ ಶ್ರದ್ಧಾ