ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ತಲೆ ಎತ್ತಲಿದೆ ಶ್ರೀರಾಮನ ಮೂರ್ತಿ

Public TV
2 Min Read
Ram Mandir

ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನ ಹೊಂದಿರಲಿದೆ. ಈ ಚಿನ್ನ ಲೇಪಿತ ಸಿಂಹಾಸನದ ಮೇಲೆ ರಾಮನ ಮೂರ್ತಿ (Ram Lalla Idol) ಸ್ಥಾಪಿಸಲಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Ram Janmabhoomi Trust) ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ.

ಈಗಾಗಲೇ ಅಮೃತ ಶಿಲೆಯ ಸಿಂಹಾಸನವನ್ನು ರಾಜಸ್ಥಾನದ ಕುಶಲಕರ್ಮಿಗಳು ತಯಾರಿಸುತ್ತಿದ್ದು, 8 ಅಡಿ ಎತ್ತರ, 3 ಅಡಿ ಉದ್ದ ಹಾಗೂ 4 ಅಡಿ ಅಗಲ ಇರಲಿದೆ. ಡಿಸೆಂಬರ್‌ 15ರ ಒಳಗೆ ಅಯೋಧ್ಯೆ ತಲುಪಲಿದೆ. ರಾಮಮಂದಿರದ ಗರ್ಭಗುಡಿಯಲ್ಲಿ ಸಿಂಹಾಸನ ಇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

Ram Mandir 2

ಶ್ರೀರಾಮನ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿ (Gold And Silver) ವಸ್ತುಗಳನ್ನ ದಾನ ಮಾಡಿದ್ದಾರೆ. ಟ್ರಸ್ಟ್‌ ರಚನೆಗೂ ಮೊದಲು ಮತ್ತು ನಂತರ ದಾನ ಮಾಡಿದ ಚಿನ್ನ-ಬೆಳ್ಳಿ ವಸ್ತುಗಳು, ನಾಣ್ಯಗಳು, ಇಟ್ಟಿಗೆಗಳನ್ನು ಕರಗಿಸಲಾಗುತ್ತದೆ. ಅಲ್ಲದೇ ದಾನ ಮಾಡಿದ ಚಿನ್ನ, ಬೆಳ್ಳಿ ವಸ್ತುಗಳನ್ನು ಘನೀಕರಿಸಿ, ಸುರಕ್ಷಿತವಾಗಿಡಲಾಗುತ್ತದೆ. ಪ್ರತಿಷ್ಠಿತ ಸಂಸ್ಥೆಯ ಮಾರ್ಗದರ್ಶನದಲ್ಲಿ ಈ ಎಲ್ಲ ಕೆಲಸಗಳು ನಡೆಯಲಿದೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: BMTC ಸಾರಥಿಗಳ ಹಾರ್ಟ್ ಇನ್ ಡೇಂಜರ್- ಜಯದೇವ ವೈದ್ಯರ ವರದಿಯಲ್ಲಿ ಬಹಿರಂಗ

ಮಹಾಮಸ್ತಕಾಭಿಷೇಕದ ಸಿದ್ಧತೆಯ ನಡುವೆಯೇ ರಾಮಮಂದಿರ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಡಿಸೆಂಬರ್‌ 15ರ ಒಳಗೆ ರಾಮಂದಿರದ ನೆಲ ಮಹಡಿಯನ್ನ ಸಂಪೂರ್ಣ ಸಿದ್ಧಪಡಿಸಲಾಗುತ್ತದೆ. ಇನ್ನೂ ಮೊದಲ ಅಂತಸ್ತಿನ ಕಾಮಗಾರಿ 80% ಪೂರ್ಣಗೊಂಡಿದೆ. ಗರ್ಭಗುಡಿ ನಿರ್ಮಾಣವೂ ಪೂರ್ಣಗೊಂಡಿದೆ. ಪರಿಕ್ರಮ ಮಾರ್ಗದ ನೆಲಹಾಸು ಕಾಮಗಾರಿ ಮುಗಿದಿದೆ. ಈಗ ಗೃಹ ಮಂಟಪದ ಮಹಡಿಯಲ್ಲಿ ಮಾರ್ಬಲ್ ಹಾಕುವ ಕೆಲಸ ನಡೆಯುತ್ತಿದೆ. ಮೆಟ್ಟಿಲುಗಳ ಜೊತೆಗೆ ಇತರ ಸ್ಥಳಗಳಲ್ಲಿ ನೆಲಹಾಸು ಕೆಲಸ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಆಧುನಿಕ ಉದ್ಯಮದ ತೊಟ್ಟಿಲು – ರಾಜ್ಯೋತ್ಸವಕ್ಕೆ ಶುಭಕೋರಿದ ಮೋದಿ, ಸಿಎಂ

Web Stories

TAGGED:
Share This Article