ನವದೆಹಲಿ: ದೆಹಲಿ- ರೋಹ್ಟಕ್ ಮಾರ್ಗದಲ್ಲಿ ಬರುತ್ತಿದ್ದ ಗೂಡ್ಸ್ ರೈಲಿನ 8 ಬೋಗಿಗಳು ಹರಿಯಾಣದ ಖರಾವರ್ ರೈಲು ನಿಲ್ದಾಣದ ಬಳಿ ಹಳಿತಪ್ಪಿ, ರೈಲು ಸಂಚಾರಕ್ಕೆ ಅಡ್ಡಿಯಾಯಿತು.
ಗೂಡ್ಸ್ ರೈಲು ದೆಹಲಿಯ ಶಕುರ್ ಬಸ್ತಿಯಿಂದ ರೋಹ್ಟಕ್ ಮೂಲಕ ಸೂರತ್‍ಗಡಕ್ಕೆ ಹೋಗುತ್ತಿತ್ತು. ಅದರಲ್ಲಿ ಕಲ್ಲಿದ್ದಲು ತುಂಬಲಾಗಿತ್ತು. ಆದರೆ ಹರಿಯಾಣದಲ್ಲಿ ರೈಲಿನ 7 ಬೋಗಿಗಳು ಹಳಿ ತಪ್ಪಿದೆ. ಇದಾದ ನಂತರ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ.
Advertisement
Advertisement
ಘಟನೆ ಸಂಬಂಧಿಸಿ ರೈಲ್ವೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಅಪಘಾತದ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಭವಿಸಿದ ರೈಲು ಹಳಿಯ ಒಂದು ಭಾಗಕ್ಕೂ ಹಾನಿಯಾಗಿದೆ. ಆದರೆ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ – 5 ದಿನ ಇಂಟರ್‌ನೆಟ್ ಸ್ಥಗಿತ
Advertisement
#WATCH | 8 bogies of a goods train derailed on the Delhi Rohtak railway line near Kharawar railway station of Haryana, railway track blocked pic.twitter.com/s2xCx4H6ei
— ANI (@ANI) August 7, 2022
ಈ ಬಗ್ಗೆ ಈಶಾನ್ಯ ರೈಲ್ವೆ ಟ್ವೀಟ್ ಮಾಡಿದ್ದು, ಉತ್ತರ ರೈಲ್ವೆಯ ದೆಹಲಿ ವಿಭಾಗದ ಖರವಾಡ್ ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಕಾರಣ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ, ನಾಚಿಕೆಯಾಗಬೇಕು: ಜಗದೀಶ್ ಶೆಟ್ಟರ್