ಹುಬ್ಬಳ್ಳಿ: ಕಾಂಗ್ರೆಸ್ ಅವರಿಗೆ ಈಗ ಖಾದಿ ನೆನಪಾಗಿದೆ. ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಅವರಿಗೆ ನಾಚಿಕೆ ಆಗಬೇಕೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾದಿಗೆ ಪ್ರಧಾನಿ ಮೋದಿ ಅವರು ನೀಡಿರುವ ಮನ್ನಣೆಯನ್ನು ಕಾಂಗ್ರೆಸ್‍ಗೆ ಸಹಿಸಲು ಆಗುತ್ತಿಲ್ಲ. ‘ಹರ್ ಘರ್ ತಿರಂಗಾ’ ಅಭಿಯಾನದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಹಳಷ್ಟು ವ್ಯಂಗ್ಯವಾಡುತ್ತಿದ್ದಾರೆ. ಅವರು ಐದು ವರ್ಷ ಸಿಎಂ ಆಗಿದ್ದವರು. ಅವರು ಧ್ವಜದ ಬಗ್ಗೆ ಈ ರೀತಿಯಲ್ಲಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮನಬಂದಂತೆ ಗುಂಡಿನ ದಾಳಿ- ಕಿರಾತಕನ ಗುಂಡೇಟಿಗೆ ನಾಲ್ವರು ಬಲಿ, ಆರೋಪಿ ಪರಾರಿ
Advertisement
Advertisement
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಮಯದಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅನ್ನೋದು ನೆನಪು ಮಾಡಿಕೊಳ್ಳಿ. ಖಾದಿ ಗ್ರಾಮೋದ್ಯೋಗ ಕಾರ್ಮಿಕರ ವಿಚಾರದಲ್ಲಿ ಬಿಜೆಪಿ ಮಾಡಿಕೊಟ್ಟಿರುವ ಪ್ರೋತ್ಸಾಹ ಯಾರು ನೀಡಿಲ್ಲ. ಈಗ ದೇಶ ಸಂಭ್ರಮಪಡುತ್ತಿರುವ ಸಮಯದಲ್ಲಿ ತಮ್ಮ ರಾಜಕೀಯ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.