ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಸಂದೀಪ್ ಸಿಂಗ್ ಅಲಿಯಾಸ್ ಕೆಕ್ಡಾ, ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮನ್ನಾ, ತಲ್ವಾಂಡಿ ಸಾಬೋ, ಬಟಿಂಡಾ, ಧೈಪೈ, ಫರೀದ್‌ಕೋಟ್‌ನ ಮನ್‌ಪ್ರೀತ್ ಭಾವು, ಅಮೃತಸರದ ದೊಡೆ ಕಲ್ಸಿಯಾ ಗ್ರಾಮದ ಸರಾಜ್ ಮಿಂಟು, ಹರಿಯಾಣದ ತಖತ್-ಮಾಲ್‌ನ ಪ್ರಭದೀಪ್ ಸಿಧು ಅಲಿಯಾಸ್ ಪಬ್ಬಿ, ಮೋನು ದಾಗರ್, ಪವನ್ ಬಿಷ್ಣೋಯ್, ನಸೀಬ್ ಹಾಗೂ ಫತೇಹಾಬಾದ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್
ಗಾಯಕ ಸಿಧು ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿದವರಿಗೆ ರಕ್ಷಣೆ, ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಣೆ ಹಾಗೂ ಸರಕು ಸಹಕಾರ ನೀಡಿರುವ ಆರೋಪದ ಮೇಲೆ ಈ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ
ಏನಿದು ಪ್ರಕರಣ?
ಪಂಜಾಬ್‌ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು 424 ಮಂದಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯುವ ಮಹತ್ವದ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮೂಸೆವಾಲಾ ಅವರ ಹತ್ಯೆ ನಡೆದಿತ್ತು.
ನಡೆದಿದ್ದೇನು?
ಜವಾಹರ್ ಕೆ ಗ್ರಾಮದ ದೇವಸ್ಥಾನದ ಬಳಿ ಮೂಸೆವಾಲಾ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಅವರ ಕಾರಿನ ಮೇಲೆ 10 ಬಾರಿ ಗುಂಡು ಹಾರಿಸಿದ್ದಾರೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಮಾನ್ಸಾದ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೂ ಪ್ರಯೋಜನವಾಗದೆ ಮೂಸೆವಾಲಾ ಮೃತಪಟ್ಟಿದ್ದರು. ಇದಕ್ಕೆ ಪಂಜಾಬ್ ಸಿಎಂ ಸಹ ಸಂತಾಪ ಸೂಚಿಸಿದ್ದರು.