ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ ಸ್ಯಾಂಡಲ್‌ವುಡ್ ತಾರೆಯರು

Public TV
1 Min Read
INDEPENDENCE DAY

ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮ ಕನ್ನಡ ಚಿತ್ರರಂಗದಲ್ಲೂ ಮನೆ ಮಾಡಿದೆ. 77ನೇ ಸ್ವಾತಂತ್ರ್ಯದಿನವನ್ನ ಸ್ಯಾಂಡಲ್‌ವುಡ್ (Sandalwood) ತಾರೆಯರು ಕೂಡ ಆಚರಿಸಿದ್ದಾರೆ. ತಮ್ಮದೇ ಭಿನ್ನ ಶೈಲಿಯಲ್ಲಿ ತಾರೆಯರು ಶುಭಕೋರಿದ್ದಾರೆ. ಈ ದಿನದ ಸಂಭ್ರಮದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

rishab shetty

‘ಕಾಂತಾರ’ (Kantara) ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ತ್ರಿವರ್ಣ ಧ್ವಜ ಹಿಡಿದು ದೇಶ ಭಕ್ತಿ ಮೆರೆದಿದ್ದಾರೆ. ಬಿಳಿ ಶರ್ಟ್- ಪಂಚೆಯಲ್ಲಿ ರಿಷಬ್ ಕಂಗೊಳಿಸಿದ್ದಾರೆ.

asha bhat

ಸ್ಯಾಂಡಲ್‌ವುಡ್ ನಟ ಡಾಲಿ(Daali) ಮತ್ತು ರಾಬರ್ಟ್ ಬ್ಯೂಟಿ ಆಶಾ ಭಟ್ (Asha Bhat) ಅವರು ಹೆಮ್ಮೆಯಿಂದ ರಾಷ್ಟ್ರ ಧ್ವಜ ಹಿಡಿದು ನಿಂತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ.

prem

ನಟ ನೆನಪಿರಲಿ ಪ್ರೇಮ್ (Nenapirali Prem) ಅವರು ವಿಶೇಷವಾದ ಫೋಟೋ ಹಂಚಿಕೊಂಡಿದ್ದಾರೆ. ಮುಖದ ಮೇಲೆ ತ್ರಿವರ್ಣ ಧ್ವಜದ ಚಿತ್ರ ಬರೆದುಕೊಂಡಿರುವ ಅವರು ಸೆಲ್ಯೂಟ್ ಮಾಡಿದ್ದಾರೆ. ಈ ಮೂಲಕ ಅವರು ಸ್ವಾತಂತ್ರ‍್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.

ಬಿಗ್ ಬಾಸ್ ಅರವಿಂದ್ ಕೆಪಿ (Bigg Boss Aravind Kp) ಮತ್ತು ಮೇಘನಾ ರಾಜ್ (Meghana Raj) ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja) ತ್ರಿವರ್ಣ ಧ್ವಜ ಹಿಡಿದು ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ.

Share This Article