’72 ಹೂರೇನ್’ ಚಿತ್ರದ ಟ್ರೈಲರ್ ಗೆ ಸೆನ್ಸಾರ್ ನಕಾರ: ಮುಸ್ಲಿಂ ಟಾರ್ಗೆಟ್ ಕಾರಣವಾ?

Public TV
1 Min Read
72 Hooraine 1

ಟ್ಟು ಹತ್ತು ಭಾಷೆಗಳಲ್ಲಿ ರೆಡಿ ಆಗಿರುವ ಬಾಲಿವುಡ್ ನ ’72 ಹೂರೇನ್’ (72 Hooraine) ಸಿನಿಮಾದ ಟ್ರೈಲರ್ ಗೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ (ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕೃತ ಮಂಡಳಿ) ಮಂಡಳಿಯು ನಿರಾಕರಿಸಿದೆ ಎಂದು ಚಿತ್ರದ ನಿರ್ದೇಶಕ ಸಂಜಯ್ ಪುರಾಣ್ ಸಿಂಗ್ ಚೌಹಾನ್ (Sanjay Puran Singh Chauhan) ತಿಳಿಸಿದ್ದಾರೆ. ಪೂರ್ತಿ ಸಿನಿಮಾಗೆ ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ನೀಡಿದೆ. ಆದರೆ, ಟ್ರೈಲರ್ (Trailer) ಗೆ ಮಾತ್ರ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

72 Hooraine 2

ಮುಸ್ಲಿಂ ಯುವಕ-ಯುವತಿಯರನ್ನು ಭಯೋತ್ಪಾದನೆಗೆ ತಳ್ಳುವ ಹುನ್ನಾರದ ಕುರಿತಾದ ಸಿನಿಮಾ ಇದಾಗಿದ್ದು, ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನವಾಗಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದೆ. ಹಲವು ಕಡೆ ಪ್ರದರ್ಶನವಾಗಿರುವ ಚಿತ್ರವನ್ನು ಮುಂದಿನ ತಿಂಗಳು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಟ್ರೈಲರ್ ಸಿದ್ಧವಾಗಿದೆ. ಈ ಟ್ರೈಲರ್ ಗೆ ಸೆನ್ಸಾರ್ ಪ್ರಮಾಣ ಪತ್ರ ನಿರಾಕರಿಸಲಾಗಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ : ಬಾಲಿವುಡ್ ನಟನಿಗೆ ಭದ್ರತೆ ಹೇಗಿದೆ?

72 Hooraine 3

ಟ್ರೈಲರ್ ನಲ್ಲಿ ಮೃತದೇಹದ ಕಾಲುಗಳನ್ನು ತೋರಿಸಲಾಗಿದೆ. ಕಾಲುಗಳ ದೃಶ್ಯವನ್ನು ತೆಗೆದುಹಾಕುವಂತೆ ಸೆನ್ಸಾರ್ (Censor) ಮಂಡಳಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ‘ನೀವು ಸತ್ತ ನಂತರ ನಿಮಗೆ ಸ್ವರ್ಗದಲ್ಲಿ 72 ಯುವತಿಯರು ಸಿಗುತ್ತಾರೆ’ ಎನ್ನುವ ಮೂಲಕ ಭಯೋತ್ಪಾದಕ ಸಂಘಟನೆಗಳು ಯುವಕರನ್ನು ಬ್ರೈನ್ ವಾಶ್ ಮಾಡುತ್ತವೆ ಎನ್ನುವ ಮಾತಿದೆ. ಇದನ್ನೇ ಇಟ್ಟುಕೊಂಡು 72 ಹೂರೇನ್ ಸಿನಿಮಾ ಮಾಡಲಾಗಿದೆ.

ಟ್ರೈಲರ್ ಗೆ ಸೆನ್ಸಾರ್ ಪತ್ರ ಸಿಗದೇ ಇರುವ ಕಾರಣದಿಂದಾಗಿ ತಾವು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ಅವರನ್ನು ಭೇಟಿ ಮಾಡುವ ಕುರಿತು ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರನ್ನು ಚಿತ್ರತಂಡ ಭೇಟಿ ಮಾಡಿ, ಚಿತ್ರದ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

Share This Article