ಕೋಲಾರ: ಹೊಲಕ್ಕೆ ಹಸುಗಳಿಗೆ ಮೇವು ತರಲು ತೆರಳಿದ್ದ 70 ವರ್ಷದ ವೃದ್ಧೆಯ (Old Woman) ಮೇಲೆ ಅತ್ಯಾಚಾರ ಎಸಗಿ, ಬಳಿಕ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ವೇಮಗಲ್ (Vemagal) ಪೊಲೀಸ್ ಠಾಣೆ ವ್ಯಾಪ್ತಿಯ ಚಾಕರಸನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವೃದ್ಧೆ ಎಂದಿನಂತೆ ಹಸುಗಳಿಗೆ ಮೇವು ತರಲು ಹೊಲಕ್ಕೆ ತೆರಳಿದ್ದ ವೇಳೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಇದನ್ನೂ ಓದಿ: ಅಂಬೋಲಿ ಫಾಲ್ಸ್ ಬಳಿ ಗುಡ್ಡ ಕುಸಿತ – ರಸ್ತೆಗೆ ಉರುಳಿದ 4 ಬೃಹತ್ ಬಂಡೆಗಳು, ತಪ್ಪಿದ ಅನಾಹುತ
ಘಟನಾ ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ನಮಗೆ ಅನ್ಯಾಯ, ವಿಶ್ವಕಪ್ ಫಿಕ್ಸ್ ಆಗಿದೆ: ಅರ್ಜೆಂಟೀನಾ ವಿರುದ್ಧದ ಸೋಲಿನ ಬಳಿಕ ಫಿಫಾ ವಿರುದ್ಧ ಮೋಸ್ತಫಾ ಜಿಕೊ ಆಕ್ರೋಶ
