ಮುಂಬೈ: ವಿಧವೆಯನ್ನು ಮದುವೆಯಾಗಲು ಯತ್ನಿಸಿ 70 ವರ್ಷದ ವೃದ್ಧರೊಬ್ಬರು 28 ಲಕ್ಷ ಮೌಲ್ಯದ ವಸ್ತುಗಳನ್ನು ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ಘಟನೆ 2019ರ ಅಗಸ್ಟ್ ನಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಹಣವನ್ನು ಕಳೆದುಕೊಂಡ ವ್ಯಕ್ತಿಯನ್ನು ಮುಂಬೈನ ಬೊರಿವಾಲಿ ನಿವಾಸಿ ಎಂದು ಗುರುತಿಸಲಾಗಿದೆ. ಮೋಸ ಹೋದೆ ಎಂದು ಮಾನಸಿಕ ಖಿನ್ನತೆಗೆ ಒಳಗಾದ ವೃದ್ಧನಿಗೆ ಇತ್ತೀಚೆಗೆ ಹೃದಯಾಘಾತವಾಗಿದೆ. ಆ ನಂತರ ಈಗ ವೃದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಈಗ ಬೆಳಕಿಗೆ ಬಂದಿದೆ.
Advertisement
Advertisement
ವೃದ್ಧನ ಪತ್ನಿ 2018ರಲ್ಲಿ ತೀರಿ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಬ್ಬನೇ ಇದ್ದ ಅವರಿಗೆ ಆತನ ಸ್ನೇಹಿತ ಓರ್ವ ವಿಧವೆಯನ್ನು ಮದುವೆಯಾಗುವಂತೆ ಸಲಹೆ ನೀಡಿದ್ದರು. ಆದರಂತೆ ಆತನೇ 21 ವರ್ಷದ ಮಗಳಿರುವ ವಿಧವೆಯನ್ನು ತೋರಿಸಿದ್ದನು. ಆಗ ವಿಧವೆ ಮತ್ತು ಈ ವೃದ್ಧನ ನಡುವೆ ಮದುವೆ ಮಾತುಕತೆಯಾಗಿದೆ. ಇದರ ಜೊತೆಗೆ ವಿಧವೆಯ ತಂದೆ, ಸಹೋದರರು ಮತ್ತು ಮಗಳು ಮುಂಬೈಗೆ ಬಂದು ವೃದ್ಧನನ್ನು ಭೇಟಿಯಾಗಿದ್ದಾರೆ. ಜೊತೆಗೆ ವೃದ್ಧನ ಮನೆಯಲ್ಲೇ ಉಳಿದುಕೊಂಡಿದ್ದರು.
Advertisement
Advertisement
ವಿಧವೆ ಮೂಲತಃ ಜೈಪುರದವರು ಆದ ಕಾರಣ ಅಲ್ಲಿಯೇ ರಿಜಿಸ್ಟರ್ ಮದುವೆಯಗೋಣ ಎಂದು ಹೇಳಿದ್ದಾರೆ. ಅದಕ್ಕೆ ವದ್ಧನು ಕೂಡ ಒಪ್ಪಿದ್ದು, ಎಲ್ಲರೂ ಜೈಪುರಕ್ಕೆ ಹೋಗಿದ್ದಾರೆ. ಅಲ್ಲಿ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆಗೆ ಬೇಕಾದ ಎಲ್ಲ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಒಂದು ತಿಂಗಳ ನಂತರ ಮದುವೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಈ ವೇಳೆ ಒಂದು ತಿಂಗಳ ಕಾಲ ಎಲ್ಲರೂ ಮುಂಬೈನಲ್ಲೇ ಇರೋಣ ಎಂದು ಮತ್ತೆ ವೃದ್ಧನ ಮನೆಗೆ ಬಂದಿದ್ದಾರೆ.
ವೃದ್ಧನ ಮನೆಯಲ್ಲೇ ಉಳಿದಿದ್ದ ವಿಧವೆ ಮತ್ತು ಆತನ ಕುಟುಂಬದವರು, ವೃದ್ಧನಿಗೆ ಕಾಣದ ಹಾಗೇ ಮನೆಯಲ್ಲಿ ಇದ್ದ ಚಿನ್ನಾಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾಳೆ. ಜೊತೆಗೆ ಆಸ್ತಿಗೆ ಸಂಬಂಧಿಸಿದ ಕೆಲ ಪತ್ರಗಳನ್ನು ತೆಗೆದುಕೊಂಡು ವೃದ್ಧನ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಮನೆಯಲ್ಲಿ ಯಾರೂ ಕಾಣದೆ ಇದ್ದಾಗ ವೃದ್ಧ ಅನುಮಾನಗೊಂಡು ಮನೆಯಲ್ಲಿರುವ ವಸ್ತುಗಳನ್ನು ಚೆಕ್ ಮಾಡಿದಾಗ ಬರೋಬ್ಬರಿ 28 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಆಗ ತಕ್ಷಣ ವೃದ್ಧ ಹಾಗೂ ವೃದ್ಧನ ಸ್ನೇಹಿತ ಜೈಪುರಕ್ಕೆ ಹೋಗಿದ್ದಾರೆ. ಅಲ್ಲಿ ದಾಖಲಾತಿಗಳನ್ನು ಚೆಕ್ ಮಾಡಿದಾಗ ಅವರು ಮೋಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೋಸ ಹೋಗಿ ಮನೆಯ ವಸ್ತುಗಳನ್ನು ಕಳೆದುಕೊಂಡ ನೋವಿನಿಂದ ಜೈಪುರದಲ್ಲೇ ವೃದ್ಧನಿಗೆ ಹೃದಯಾಘಾತವಾಗಿದೆ. ಅಲ್ಲಿ ಚಿಕಿತ್ಸೆ ಪಡೆದು ಮುಂಬೈಗೆ ವಾಪಸ್ ಆಗಿದ್ದಾರೆ. ಆದರೆ ಅಲ್ಲಿಂದ ವಾಪಸ್ ಬಳಿಕ ಅದೇ ಖಿನ್ನತೆ ಜಾರಿದ ವೃದ್ಧ ಇತ್ತೀಚೆಗೆ ಮತ್ತೆ ಹೃದಯಾಘಾತದಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡಿದ್ದಾರೆ.