ಜಕಾರ್ತ: ಇಂಡೋನೇಷ್ಯಾದ(Indonesia) ಪೂರ್ವ ಪಪುವಾ ನ್ಯೂಗಿನಿಯಾದಲ್ಲಿ ಭಾನುವಾರ 7.6 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ಭೂಕಂಪನದ ಬಗ್ಗೆ ವರದಿ ಮಾಡಿದ ಅಮೆರಿಕದ ಜಿಯೋಲಾಜಿಕಲ್ ಸರ್ವೆ ಸುನಾಮಿಯ(Tsunami) ಎಚ್ಚರಿಕೆಯನ್ನು ನೀಡಿದೆ.
ಕರಾವಳಿ ಪ್ರದೇಶವಾದ ಮಡಂಗ್ ಬಳಿ ಹಾಗೂ ಒಳನಾಡಿನ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ ಎನ್ನಲಾಗಿದೆ. ಸದ್ಯ ಯಾವುದೇ ಪ್ರಾಣ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: 2ನೇ ಎಲಿಜಬೆತ್ ನಿಧನಕ್ಕೆ ಇಂದು ದೇಶಾದ್ಯಂತ ಶೋಕಾಚರಣೆ
Advertisement
Advertisement
ಕೈನಂಟು ಪಟ್ಟಣದ 67 ಕಿ.ಮೀ ದೂರದಲ್ಲಿ, ಭೂಮಿಯ 61 ಕಿ.ಮೀ ಆಳದಲ್ಲಿ ಭೂಕಂಪದ ಕೆಂದ್ರಬಿಂದುವನ್ನು ಪತ್ತೆಹಚ್ಚಲಾಗಿದೆ. ಸುನಾಮಿ ಬೆದರಿಕೆ ಈಗ ಕಳೆದುಹೋಗಿದೆ ಎನ್ನಲಾಗುತ್ತಿದೆ. ಆದರೂ ಕೆಲ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಮಟ್ಟದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಎಕೋಸ್ಪೇಸ್‍ನಲ್ಲಿ ಮುಳುಗಿದ 40 ಐಷಾರಾಮಿ ಕಾರುಗಳು!
Advertisement
2004ರಲ್ಲಿ ಇಂಡೋನೇಷ್ಯಾದಲ್ಲಿ 9.1 ತೀವ್ರತೆಯ ಭೂಕಂಪ ಸಂಭವಿಸಿ, ಸುನಾಮಿಯನ್ನು ಪ್ರಚೋದಿಸಿತ್ತು. ಇದರಿಂದ 2,20,000 ಜನರು ಸಾವನ್ನಪ್ಪಿದ್ದರು.