ನವದೆಹಲಿ: ಗುರುವಾರ ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್‌ಗೆ ಗೌರವಾರ್ಥವಾಗಿ ಭಾನುವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗಿದೆ. ಬ್ರಿಟನ್‌ನ ರಾಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಎಲಿಜಬೆತ್ ಗುರುವಾರ ಸ್ಕಾಟ್ಲೆಂಡ್‌ನಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು.
Advertisement
ಅಗಲಿದ ಗಣ್ಯರಿಗೆ ಗೌರವದ ಸೂಚಕವಾಗಿ ಸೆಪ್ಟೆಂಬರ್ 11ರಂದು ಒಂದು ದಿನದ ಶೊಕಾಚರಣೆಯನ್ನು ಮಾಡಬೇಕೆಂದು ಭಾರತ ಸರ್ಕಾರ ನಿರ್ಧರಿಸಿತ್ತು. ಇದರ ಹಿನ್ನೆಲೆ ಇಂದು ಭಾರತದ ಕೆಂಪು ಕೋಟೆ ಹಾಗೂ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು.
Advertisement
Delhi | National flags at Red Fort and Rashtrapati Bhavan fly at half-mast as one-day state mourning is being observed in the country following the demise of Queen Elizabeth II. pic.twitter.com/dPc7IvHrlh
— ANI (@ANI) September 11, 2022
Advertisement
ಪ್ರಧಾನಿ ನರೇಂದ್ರ ಮೋದಿ ಅವರು ರಾಣಿಯ ಅಗಲಿಕೆಗೆ ಸಂತಾಪ ಸೂಚಿಸಿ, 2015 ಹಾಗೂ 2018ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ರಾಣಿಯೊಂದಿಗಿನ ಭೇಟಿಯನ್ನು ಸ್ಮರಿಸಿದ್ದರು. ಈ ಬಗ್ಗೆ ಟ್ವೀಟ್‌ನಲ್ಲಿ, ಬ್ರಿಟನ್ ರಾಣಿಯ ಕಾಳಜಿ ಹಾಗೂ ದಯೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ತಮ್ಮ ಮದುವೆಯ ಸಂದರ್ಭ ಮಹಾತ್ಮ ಗಾಂಧಿಯವರು ನೀಡಿದ್ದ ಕರವಸ್ತ್ರವನ್ನು ನನಗೆ ತೋರಿಸಿದ್ದರು. ನಾನು ಅವರ ನಡವಳಿಕೆಗೆ ಯಾವಾಗಲೂ ಋಣಿಯಾಗಿರುತ್ತೇನೆ ಎಂದು ಬರೆದಿದ್ದರು. ಇದನ್ನೂ ಓದಿ: ನಾಳೆಯಿಂದ ಮಳೆಗಾಲದ ಅಧಿವೇಶನ- ಕಾಂಗ್ರೆಸ್ ವಿರುದ್ಧ ರೀಡೂ ಅಸ್ತ್ರಕ್ಕೆ ಬಿಜೆಪಿ ಸಿದ್ಧತೆ
Advertisement
ಅಗಲಿದ ರಾಣಿಯ ಸರ್ಕಾರಿ ಅಂತ್ಯಕ್ರಿಯೆ ಸೋಮವಾರ ಲಂಡನ್‌ನ ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು