ಲಂಡನ್: ಭಾರತದ ಪುರುಷರ ತಂಡ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಆಡಲು ಸಿದ್ಧತೆ ಮಾಡಿಕೊಂಡರೆ ಇತ್ತ ಭಾರತ ಮಹಿಳಾ ತಂಡ 7 ವರ್ಷಗಳ ಬಳಿಕ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸಿದೆ.
ಭಾರತ ಮಹಿಳಾ ತಂಡ 2014ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿತ್ತು. ಬಳಿಕ ಇದೀಗ 7 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇಂದಿನಿಂದ ಅತಿಥೇಯ ಇಂಗ್ಲೆಂಡ್ ವಿರುದ್ಧ ಬ್ರಿಸ್ಟಲ್‍ನಲ್ಲಿ ಏಕೈಕ ಟೆಸ್ಟ್ ಪಂದ್ಯಾಟ ನಡೆಯಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ
ಭಾರತ ತಂಡ 2014ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಬಳಿಕ ಇಲ್ಲಿವರೆಗೆ ಟೆಸ್ಟ್ ಪಂದ್ಯ ಆಡಿಲ್ಲ. ಇದೀಗ 7 ವರ್ಷಗಳ ಬಳಿಕ ಮತ್ತೆ ಮಹಿಳಾ ತಂಡ ಟೆಸ್ಟ್ ಪಂದ್ಯವಾಡುತ್ತಿದೆ. ಅಂದು ತವರಿನಲ್ಲಿ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ಭಾರತ ತಂಡದ ನಾಯಕಿಯಾಗಿದ್ದರು. ಇದೀಗ ಕೂಡ ಮಿಥಾಲಿ ರಾಜ್ ಅವರೆ ಭಾರತ ತಂಡದ ನಾಯಕಿಯಾಗಿದ್ದಾರೆ. ಅದಲ್ಲದೆ ಅಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಜಯಗಳಿಸಿತ್ತು. ಆ ತಂಡದಲ್ಲಿದ್ದ ಭಾರತದ ಏಳು ಆಟಗಾರ್ತಿಯರು ಈಗ ಭಾರತ ತಂಡದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಭಾರತ ಮಹಿಳಾ ತಂಡದಲ್ಲಿ ಹಿರಿಯ ಮತ್ತು ಕಿರಿಯ ಆಟಗಾರ್ತಿಯರು ಇದ್ದಾರೆ. ಅನುಭವಿ ಆಟಗಾರ್ತಿಯಾರಾದ ಹರ್ಮನ್ ಪ್ರೀತ್ ಕೌರ್, ಸ್ಮತಿ ಮಂಧನಾ, ವೇಗಿ ಜೂಲನ್ ಗೋಸ್ವಾಮಿ ಇದ್ದರೆ ಕಿರಿಯ ಆಟಗಾರ್ತಿಯಾಗಿ ತಂಡದಲ್ಲಿ 17 ವರ್ಷದ ಶಫಾಲಿ ವರ್ಮ ಕೂಡ ಸ್ಥಾನ ಪಡೆದಿದ್ದಾರೆ. ಹಾಗಾಗಿ ಈ ಟೆಸ್ಟ್ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ರೋಹಿತ್ ಶರ್ಮಾ, ಕೊಹ್ಲಿ ಹಿಂದಿಕ್ಕಿದ ಮಿಥಾಲಿ ರಾಜ್
We cannot contain our excitement levels ????????
Just a few hours to go ⌛️
ARE YOU READY❓#TeamIndia #ENGvIND pic.twitter.com/kk3BpVc5RX
— BCCI Women (@BCCIWomen) June 16, 2021
ಭಾರತ ತಂಡದಂತೆ ಇಂಗ್ಲೆಂಡ್ ತಂಡ ಕೂಡ ಬಲಿಷ್ಠವಾಗಿ ಗೋಚರಿಸುತ್ತಿದ್ದು, ಭಾರತ ತಂಡದ ಮೇಲೆ ಒಂದು ಕಣ್ಣಿಟ್ಟಿದೆ. ಈಗಾಗಲೇ ಇಂಗ್ಲೆಂಡ್ ಆಟಗಾರ್ತಿಯರು ಭಾರತ ತಂಡದ ಆಟಗಾರ್ತಿಯರ ಬಗ್ಗೆ ಎಚ್ಚರಿಕೆಯ ಮಾತನಾಡಿದ್ದಾರೆ.