Connect with us

ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್‌ ವಿಶ್ವದಾಖಲೆ

ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್‌ ವಿಶ್ವದಾಖಲೆ

ಲಕ್ನೋ: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರ್ಣಗೊಳಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಿಥಾಲಿ ರಾಜ್‌ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 4ನೇ ಏಕದಿನ ಪಂದ್ಯಕ್ಕೂ ಮೊದಲು ಮಿಥಾಲಿ ರಾಜ್‌ 6,974 ರನ್‌ ಹೊಡೆದಿದ್ದರು. ಇಂದು ತನ್ನ 213ನೇ ಪಂದ್ಯದಲ್ಲಿ 26 ರನ್‌ ಹೊಡೆಯುವ ಮೂಲಕ ಈ ಸಾಧನೆ ಮಾಡಿದರು.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಮಾಡಿದ ಆಟಗಾರರ ಪೈಕಿ ಇಂಗ್ಲೆಂಡಿನ ಸಿಎಂ ಎಡ್ವರ್ಡ್ಸ್‌ 5992 ರನ್‌, ಆಸ್ಟ್ರೇಲಿಯದ ಬಿಜೆ ಕ್ಲಾರ್ಕ್‌ 4,844 ರನ್‌ ಹೊಡಿದ್ದಾರೆ. ಇಂದಿನ ಪಂದ್ಯದಲ್ಲಿ ಮಿಥಾಲಿ ರಾಜ್‌ 45 ರನ್‌(71 ಎಸೆತ, 4 ಬೌಂಡರಿ ಹೊಡೆದು ಔಟಾದರು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಪೂನಮ್‌ ರಾವತ್‌ ಅವರ 104 ರನ್‌(123 ಎಸೆತ, 10 ಬೌಂಡರಿ) ಸಹಾಯದಿಂದ 4 ವಿಕೆಟ್‌ ನಷ್ಟಕ್ಕೆ 266 ರನ್‌ ಹೊಡೆದಿತ್ತು. ದಕ್ಷಿಣ ಆಫ್ರಿಕಾ 48.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 269 ರನ್‌ ಹೊಡೆಯುವ ಮೂಲಕ 7 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು.

Advertisement
Advertisement