Bengaluru CityCoronaKarnatakaLatestMain PostMonsoonMost Shared

ಬಾಡಿಗೆ ಸಿಗದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಟ್ಯಾಕ್ಸಿ ಚಾಲಕ ಆತ್ಮಹತ್ಯೆ

Advertisements

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರೈವಲ್ ಬಳಿ ಕೆಎಸ್‍ಟಿಡಿಸಿ ಟ್ಯಾಕ್ಸಿ ಚಾಲಕ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರೈವಲ್ ಮುಂಭಾಗದ ಪಿಕ್ ಅಪ್ ಪಾಯಿಂಟ್ ನಲ್ಲಿ ತನ್ಮ ಕಾರಿನಲ್ಲೇ ಕೂತು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲೇ ಇದ್ದ ಏರ್ ಪೋರ್ಟ್ ಭದ್ರತಾ ಸಿಬ್ಬಂದಿ, ಪೊಲೀಸರು, ಕಾರಿನ ಗಾಜು ಜಖಂಗೊಳಿಸಿ ಕೂಡಲೇ ಪ್ರತಾಪ್ ಅವರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ಶೇ.80 ರಷ್ಟು ಸುಟ್ಟು ಗಾಯಗೊಂಡಿದ್ದ ಪ್ರತಾಪ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರತಾಪ್ ಪ್ರಾಣಬಿಟ್ಟಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?
ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದಿಂದ ಪ್ರಯಾಣಿಕರನ್ನು ಪಿಕ್ ಅಪ್ ಮಾಡಿ ಡ್ರಾಪ್ ಮಾಡುತ್ತಿದ್ದ ಪ್ರತಾಪ್ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಬಾಡಿಗೆ ಸಿಗುತ್ತಿರಲಿಲ್ಲ. ಇದರಿಂದ ಆದಾಯ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟಿದ್ದ ಪ್ರತಾಪ್, ಆತ್ಮಹತ್ಯೆಗೆ ಶರಣಾಗಿದ್ದಾರೆ.

ಏರ್ ಪೋರ್ಟ್ ಟ್ಯಾಕ್ಸಿ ಸೇವೆ ಬಂದ್
ಚಾಲಕ ಪ್ರತಾಪ್ ಸಾವಿನ ನಂತರ ಏರ್‍ಪೋರ್ಟ್ ನಲ್ಲಿ ಟ್ಯಾಕ್ಸಿ ಚಾಲಕರು ಪ್ರತಿಭಟನೆಗಿಳಿದಿದ್ದಾರೆ. ಟ್ಯಾಕ್ಸಿ ಸೇವೆ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುತ್ತಿದ್ದು, ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ಇದರಿಂದ ಚಾಲಕರ ಪರಿಸ್ಥಿತಿ ಜೀವನ್ಮರಣ ಹೋರಾಟವಾಗಿದೆ. ಹೀಗಾಗಿ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದಾರೆ.

ಪ್ರಮುಖ ಬೇಡಿಕೆಗಳೇನು?
ವಿಮಾನ ನಿಲ್ದಾದಿಂದ ಕಡಿಮೆ ಅಂತರದ ಬಾಡಿಗೆಗೂ ವಾಹನ ಮಾಲೀಕರಿಂದ ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ಹಣ ನೀಡಬೇಕು. ಪ್ರತಿ ಬಾಡಿಗೆಗೂ 114 ರೂಪಾಯಿ ಸಂದಾಯ ಮಾಡಬೇಕಿದೆ. ಉದಾಹರಣೆಗೆ 500-600 ರೂಪಾಯಿ ಬಾಡಿಗೆ ಸಿಕ್ಕರೂ ಪ್ರಾಧಿಕಾರಕ್ಕೆ 118 ರೂಪಾಯಿ ಶುಲ್ಕ ಪಾವತಿಸಬೇಕು. ಹೀಗಾಗಿ 797 ರೂಪಾಯಿ ಬಾಡಿಗೆ ಹಣ ಬಂದರೆ ಅದರಲ್ಲಿ 118 ರೂ. ಪ್ರಾಧಿಕಾರಕ್ಕೆ, 95 ರೂ. ಟೋಲ್ ಚಾರ್ಜ್, 40 ರೂ. ಜಿಎಸ್‍ಟಿ ಹಾಗೂ 68 ರೂ. ಕೆಎಸ್‍ಟಿಡಿಸಿ ಸಂಸ್ಥೆ ನೀಡಬೇಕು.

ಉಳಿದಂತೆ 200-300 ರೂ. ಡಿಸೇಲ್ ಖರ್ಚು, 200 ದಿನದ ಊಟದ ಖರ್ಚು ಎಂದು ಲೆಕ್ಕ ಮಾಡಿದರೂ ಇಡೀ ದಿನದಲ್ಲಿ 3 ಟ್ರಿಪ್ ಸಿಕ್ಕರೂ ಚಾಲಕನಿಗೆ ಸಿಗುವ ಆದಾಯ 200-300 ರೂಪಾಯಿ ಮಾತ್ರ. ಇದರಿಂದ ಚಾಲಕರು ತೀವ್ರ ಅರ್ಥಿಕ ಸಂಕಷ್ಟಕ್ಕೆ ಓಳಗಾಗಿದ್ದಾರೆ. ಕೊರೊನಾ ನಂತರವಂತೂ ಇದು ಅತಿಯಾಗಿ ಚಾಲಕರಿಗೆ ಜೀವನವೇ ದುಸ್ತರವಾಗಿದೆ. ಸದ್ಯ ಡೀಸೆಲ್ ದರ ಸಹ ಹೆಚ್ಚಾಗಿದೆ. ಅಲ್ಲದೆ ಒಲಾ, ಉಬರ್ ಕ್ಯಾಬ್ ಗಳ ದರ ಕೆಎಸ್‍ಟಿಡಿಸಿ ಸಂಸ್ಥೆಯ ದರಕ್ಕಿಂತ ಕಡಿಮೆ ಇದ್ದು, ಪ್ರಯಾಣಿಕರು ಓಲಾ, ಉಬರ್ ಮೊರೆ ಹೋಗುತ್ತಿದ್ದಾರೆ. ಓಲಾ, ಉಬರ್ ನವರು ಬೆಂಗಳೂರು ಮಹಾನಗರದಿಂದ ಏರ್ ಪೋರ್ಟ್ ಗೆ ಪ್ಯಾಸೆಂಜರ್ ಪಿಕ್ ಅಪ್ ಮಾಡುವುದರಿಂದ ಅವರಿಗೆ ಹೋಗುವಾಗಕೂ ಹಣ ಬರುವಾಗಲೂ ಹಣ ಸಿಗುವುದರಿಂದ ಅವರಿಗೆ ಅಷ್ಟೊಂದು ತೊಂದರೆ ಇಲ್ಲ ಎಂಬ ವಾದವಿದೆ. ಆದ್ರೆ ಕೆಎಸ್‍ಟಿಡಿಸಿ ಯವರು ಕೇವಲ ವಿಮಾನ ನಿಲ್ದಾಣದಿಂದ ಪಿಕ್ ಅಪ್ ಮಾಡಿ ಡ್ರಾಪ್ ಮಾಡ್ತಾರೆ, ಮರಳಿ ಏರ್‍ರ್ಪೋ ಗೆ ಪ್ಯಾಸೆಂಜರ್ ಕರೆತರುವ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರಮುಖವಾಗಿ ಕೆಎಸ್‍ಟಿಡಿಸಿ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕ್ತಿದ್ದಾರೆ.

ಪರಿಹಾರ ಏನು?
ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಂದಾಯ ಮಾಡುತ್ತಿರುವ ಹಣದಲ್ಲಿ ಶೇ.50 ರಷ್ಟು ಕಡಿತ ಮಾಡಲು ಆಗ್ರಹ ಮಾಡಲಾಗುತ್ತಿದೆ. ಪ್ರಸ್ತುತ ಇರುವ 118 ರೂಪಾಯಿ ಶುಲ್ಕದ ಹೊರೆಯನ್ನ 59 ರೂಪಾಯಿ ಗೆ ಇಳಿಸುವಂತೆ ಆಗ್ರಹ ಮಾಡಿದ್ದಾರೆ. ಮತ್ತೊಂದೆಡೆ ಒಂದೇ ಏರ್ಪೋರ್ಟ್ ಒಂದೇ ದರ. ಕೆಎಸ್‍ಟಿಡಿಸಿ. ಓಲಾ ಊಬರ್ ಆಗಲೀ ಎಲ್ಲ ಟ್ಯಾಕ್ಸಿಗಳಲ್ಲೂ ಪ್ರತಿ ಕಿಲೋಮೀಟರ್ ಗೂ ಒಂದೇ ದರ ಇರಬೇಕು ಆಗ ಯಾರಿಗೂ ಅನ್ಯಾಯ ಆಗಲ್ಲ ಅನ್ನೋದು ಚಾಲಕರ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಒಟ್ಟಾರೆಯಾಗಿ ಏರ್‍ಪೋರರ್ಟ್ ನಲ್ಲಿ ಟ್ಯಾಕ್ಸಿಗಳ ಸಂಖ್ಯೆ ಅತಿಯಾಗಿದೆ. ಸಂಖ್ಯೆಗೆ ಅನುಗುಣವಾಗಿ ಕೊರೊನಾ ಸಂಕಷ್ಟದ ನಂತರ ಪ್ರಯಾಣಿಕರ ಒಡಾಟ ಇಲ್ಲ. ಈ ಮಧ್ಯೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸಹ ಹೆಚ್ಚಳವಾಗುತ್ತಿದೆ. ಇವೆಲ್ಲ ಕಾರಣಗಳಿಂದ ಟ್ಯಾಕ್ಸಿ ಚಾಲಕರಿಗೆ ನೀರೀಕ್ಷಿತ ಆದಾಯ ಇಲ್ಲದೆ, ಸಂಕಷ್ಟದ ನಡುವೆ ವಾಹನ ಚಲಾಯಿಸುವಂತಾಗಿದೆ.

Leave a Reply

Your email address will not be published.

Back to top button