62ನೇ ವರ್ಷದ ಹುಟ್ಟುಹಬ್ಬ ಆಚರಿಸಲು 62 ಕಿಮೀ ರನ್ನಿಂಗ್

Public TV
1 Min Read
fyling sandhu

ನವದೆಹಲಿ: 62.4 ಕಿಲೋಮೀಟರ್ ರನ್ನಿಂಗ್ ಮಾಡಿ ವದ್ಧರೊಬ್ಬರು ತನ್ನ 62ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಇತ್ತೀಚಿಗೆ ವಯಸ್ಸು 40 ಗಡಿ ದಾಟಿದರೆ ಸಾಕು, ಜನರು ನಡೆದುಕೊಂಡು ಹೋಗುವುದು ಕಷ್ಟ ಎನ್ನುತ್ತಾರೆ. ಆದರೆ ನಾವು ಫಿಟ್ ಆಗಿ ಇದ್ದರೆ ವಯಸ್ಸು ಎಂಬುದು ಕೇವಲ ಒಂದು ನಂಬರ್ ಅಷ್ಟೇ ಎಂದು 62 ವರ್ಷದ ವೃದ್ಧ ಬರೋಬ್ಬರಿ 62 ಕಿಮೀ ಅನ್ನು 7 ಗಂಟೆ 32 ನಿಮಿಷದಲ್ಲಿ ಓಡಿ ಪ್ರೂವ್ ಮಾಡಿದ್ದಾರೆ.

ಈ ಬಗ್ಗೆ ಸ್ವತಃ ರನ್ನಿಂಗ್ ಮಾಡಿದ ವೃದ್ಧ ಜಾಸ್ಮರ್ ಸಿಂಗ್ ಸಂಧು ಅವರು ಟ್ವೀಟ್ ಮಾಡಿದ್ದು, ಇಂದು ನಾನು ನನ್ನ ಜೀವನದ 62 ವರ್ಷಗಳನ್ನು ಪೂರೈಸಿದ್ದೇನೆ ಮತ್ತು ಈ ಸಂದರ್ಭದಲ್ಲಿ 62.4 ಕಿ.ಮೀ ಓಟವನ್ನು ಪೂರ್ಣಗೊಳಿಸಿದೆ. ನನ್ನ ವಯಸ್ಸಿಗೆ ಇನ್ನೂ ಮುಂದಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ತಾವು ರನ್ನಿಂಗ್ ಮಾಡಿದ ಫಿಟ್ನೆಸ್ ಟ್ರ್ಯಾಕರ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಇವರು ಫ್ಲೈಯಿಂಗ್ ಸಂಧು ಎಂಬ ಹೆಸರಿನ ಟ್ವಿಟ್ಟರ್ ಖಾತೆಯನ್ನು ಹೊಂದಿದ್ದು, ಅದರಲ್ಲಿ ತನ್ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಂಧು ಅವರ ರನ್ನಿಂಗ್ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, 5.17 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 38,400ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ವೃದ್ಧನ ಫಿಟ್ನೆಸ್‍ಗೆ ಫಿದಾ ಆಗಿರುವ ನೆಟ್ಟಿಗರು, ನೀವು ನಮಗೆ ಸ್ಫೂರ್ತಿ ಸರ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಾವು ದಿನ 3 ಕಿಮೀ ಓಡುವಷ್ಟರಲ್ಲಿ ಸುಸ್ತಾಗುತ್ತೇವೆ. ಆದರೆ ನಿಮ್ಮನ್ನು ನಾವು ನೋಡಿ ಕಲಿಯಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *