ರಾಯಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಬಾಂಬ್(ಐಇಡಿ) ದಾಳಿಯಲ್ಲಿ ವಾಹನದಲ್ಲಿ ತೆರಳುತ್ತಿದ್ದ 6 ಮಂದಿ ರಕ್ಷಣಾ ಪಡೆಯ ಯೋಧರು ಹುತಾತ್ಮರಾಗಿರುವ ಘಟನೆ ಛತ್ತೀಸ್‍ಗಢದ ದಾಂತೇವಾಡಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಿರಾಂಡುಲ್ ಮತ್ತು ಚಾಲ್ನಾರ್ ಪ್ರದೇಶದ ಮಾರ್ಗದಲ್ಲಿ ರಸ್ತೆ ನಡುವೆ ಐಇಡಿ ಬಾಂಬ್ ಇಟ್ಟು ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ ಯೋಧರೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರು ರಾಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿದ ಪ್ರದೇಶದಲ್ಲಿ ದಾಳಿ ನಡೆದಿದ್ದು. ಭಾರೀ ಪ್ರಮಾಣದ ಶಬ್ಧ ಕೇಳಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾಗಿ ಐಜಿಪಿ ವಿವೇಕಾನಂದ ಸಿನ್ಹಾ ತಿಳಿಸಿದ್ದಾರೆ.
Advertisement
Chhattisgarh: 3 jawans of Chhattisgarh Armed Force & 2 jawans of District Force killed and 2 jawans injured in an IED blast on a police vehicle in Dantewada's Cholnar Village. Troops of CRPF rushed to the spot, More details awaited. pic.twitter.com/J6a0JMpknn
— ANI (@ANI) May 20, 2018
Advertisement
ರಕ್ಷಣಾ ಪಡೆ ನಕ್ಸಲರ ವಿರುದ್ಧ ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದ ಸರ್ಚ್ ಆಪರೇಷನ್ ವಿರುದ್ಧವಾಗಿ ಈ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ನಕ್ಸಲರು ಸುಧಾರಿತ ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಕೆ ಮಾಡಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ನಕ್ಸಲ್ ನಿಗ್ರಹ ಪಡೆಯ ಡಿಜಿಪಿ ಸುರೇಂದ್ರ ರಾಜ್ ತಿಳಿಸಿದ್ದಾರೆ.
Advertisement
ಘಟನೆ ಬಗ್ಗೆ ಮಾಹಿತಿ ಪಡೆದ ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ಸ್ಥಳಕ್ಕೆ ಧವಿಸಿ ರಕ್ಷಣಾ ಕಾರ್ಯ ನಡೆಸಿದೆ. ನಕ್ಸಲರು ಪೊಲೀಸ್ ಜೀಪ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಛತ್ತೀಸ್‍ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಬಾಂಬ್ ದಾಳಿ ನಡೆದ ದಾಂತೇವಾಡಾದಲ್ಲಿ ಎರಡು ದಿನಗಳಲ್ಲಿ ಸಾರ್ವಜನಿಕ ಸಭೆ ನಿಗಧಿಯಾಗಿದ್ದು, ಘಟನೆ ಬಳಿಕ ಹೆಚ್ಚಿನ ರಕ್ಷಣೆಯನ್ನು ಏರ್ಪಡಿಸಲಾಗಿದೆ.
Six jawans were killed in an IED blast in #Dantewada's Cholnar village. #Chhattisgarh
Read @ANI Story | https://t.co/fKIUPF1QrN pic.twitter.com/6LYNvv1jPc
— ANI Digital (@ani_digital) May 20, 2018