ಬೀದರ್: ಉತ್ತರ ಪ್ರದೇಶದಲ್ಲಿ (Uttar Pradesh) ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಬೀದರ್‌ನ (Bidar) 6 ಮಂದಿಯ ಪಾರ್ಥೀವ ಶರೀರ ಇಂದು ತವರಿಗೆ ಮರಳಲಿದೆ. 6 ಮಂದಿಯ ಮೃತದೇಹಗಳು 3 ಅಂಬುಲೆನ್ಸ್‌ಗಳ ಮೂಲಕ ಕೆಲವೇ ಗಂಟೆಗಳಲ್ಲಿ ಬೀದರ್ ತಲುಪಲಿದೆ.
ಮಹಾರಾಷ್ಟ್ರದ (Maharashtra) ನಾಂದೇಡ್‌ಗೆ ತಲುಪಿದ್ದು, ನಂತರ ಮಧ್ಯಾಹ್ನದ ವೇಳೆಗೆ ಮೃತದೇಹಗಳು ಬೀದರ್‌ಗೆ ತಲುಪಲಿದೆ. ಕುಟುಂಬಸ್ಥರು ಇಂದೇ ಬೀದರ್‌ನ ಗುಂಪಾ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲ್ಲಿದ್ದಾರೆ. ಇದನ್ನೂ ಓದಿ: ಮಂಗಳೂರಿಗರಿಗೆ ತ್ಯಾಜ್ಯ, ಮೆಡಿಕಲ್ ವೇಸ್ಟ್ ಡಂಪಿಂಗ್ – ಕಂಟಕವಾಯ್ತಾ ನೆರೆಯ ಕೇರಳ..?
Advertisement
Advertisement
ಬೀದರ್‌ನ ಲಾಡಗೇರಿ ನಗರದ ನಿವಾಸಿಗಳು ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಅಪಘಾತ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ – ಶಿವಸೇನೆ ಪುಂಡರಿಂದ ಚಾಲಕರಿಗೆ ಧಮ್ಕಿ
Advertisement
ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಮುಕ್ತಾಯವಾಗಲು ಇನ್ನೆರಡು ದಿನ ಬಾಕಿಯಿದೆ. ಮಹಾ ಶಿವರಾತ್ರಿಯ ದಿನದಂದೇ ಕುಂಭಮೇಳ ಅಂತ್ಯವಾಗಲಿದೆ. ಇದನ್ನೂ ಓದಿ: ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ