ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ ಹಣ ಚಿನ್ನಾಭರಣ ದೋಚಿದ ಕಿರಾತಕರು
ದಾವಣಗೆರೆ: ಜಿಲ್ಲೆಯ ನ್ಯಾಮತಿಯಲ್ಲಿ (Nyamati) ಒಂದೇ ದಿನ ರಾತ್ರಿ 6 ಮನೆಗಳು ಹಾಗೂ 2 ದೇವಸ್ಥಾನಗಳಲ್ಲಿ ಚಡ್ಡಿಗ್ಯಾಂಗ್ ಸರಣಿಗಳ್ಳತನ ಮಾಡಿದೆ.
Advertisement
Advertisement
ಚಡ್ಡಿಗ್ಯಾಂಗ್‍ನ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರ ಗ್ಯಾಂಗ್ ಚಡ್ಡಿ, ಟೀ ಶರ್ಟ್ ಧರಿಸಿ ರಾತ್ರಿ ವೇಳೆ ಬೀದಿ ಬೀದಿಗಳಲ್ಲಿ ತಿರುಗಾಟ ನಡೆಸಿ ಇಡೀ ಪಟ್ಟಣವನ್ನು ಸುತ್ತಾಡಿದೆ. ಬಳಿಕ ನ್ಯಾಮತಿ ಪಟ್ಟಣದ ಕಾಳಮ್ಮ ಬೀದಿಯ ಕಾಳಮ್ಮ ದೇವಸ್ಥಾನದ ಬೀಗ ಒಡೆದು ಒಂದು ತೊಲ ತಾಳಿ, ನಂತರ ನೆಹರೂ ರಸ್ತೆಯಲ್ಲಿರುವ ಮೂಕಾಂಬಿಕ ದೇಗುಲದ ಹುಂಡಿ ಒಡೆದು ಹಣ ದೋಚಿದ್ದಾರೆ.
Advertisement
Advertisement
ಇಷ್ಟೇ ಅಲ್ಲದೇ ಮರಿಡೇರ ಹೊಸಮನೆ ರಾಜಪ್ಪ ಎಂಬವರ ಮನೆಯ ಬೀರುವಿನಲ್ಲಿದ್ದ ಐದು ತೊಲದ ಬಂಗಾರ ಹಾಗೂ ನಗದು, ಮಾರಿಗುಡಿ ಬೀದಿಯ ಸಾವಿತ್ರಮ್ಮ ಎಂಬವರ ಮನೆಯಲ್ಲಿ 80 ಸಾವಿರ ನಗದು, ವಿಶ್ವೇಶ್ವರಯ್ಯ ಬೀದಿಯ ಗಡೇಕಟ್ಟೆ ಯಶೋಧಮ್ಮ ಎಂಬವರ ಮನೆಯಲ್ಲಿ 200 ಗ್ರಾಂ ಬೆಳ್ಳಿಯ ಆಭರಣ ಹಾಗೂ 15 ಸಾವಿರ ಹಣ ದೋಚಿದ್ದಾರೆ.
ಇನ್ನೂ ಶಿವಾನಂದಪ್ಪ ಬಡಾವಣೆಯ ಹಾಗೂ ಚಂದ್ರಹಾಸ್ ಬಡಾವಣೆಯಲ್ಲಿ ತಲಾ ಒಂದು ಮನೆ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಖಚಿತ ಪಡಿಸಿಕೊಂಡ ಕಳ್ಳರು ಅಕ್ಕಪಕ್ಕದ ಮನೆಯ ಬಾಗಿಲುಗಳ ಚಿಲಕಿ ಹಾಕಿ ನಂತರ ಬೀಗ ಒಡೆದು ಕಳ್ಳತನ ಮಾಡಿದ್ದಾರೆ.
ಈ ಸಂಬಂಧ ನ್ಯಾಮತಿ ಪೊಲೀಸ್ (Nyamati Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.