ಮುಂಬೈ: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ ವೇಳೆಗೆ 5ಜಿ ಸೇವೆ ಲಭ್ಯವಾಗುವ ಸಾಧ್ಯತೆಯಿದೆ.
ಆಗಸ್ಟ್ ಮಧ್ಯಭಾಗದಲ್ಲಿ ಸರ್ಕಾರ ಏರ್‌ವೇವ್ಸ್ ಹಂಚಿಕೆ ಮಾಡಲಿದೆ. ಈ ಕಾರಣದಿಂದ ಈಗಾಗಲೇ ಪರೀಕ್ಷೆ ಮಾಡಲಾಗಿರುವ ನಗರಗಳಲ್ಲಿ ಅಕ್ಟೋಬರ್‌ನಿಂದ 5ಜಿ ಸೇವೆ ಶುರುವಾಗುವ ಸಾಧ್ಯತೆಯಿದೆ.
Advertisement
ಜಿಯೋ ಈಗಾಗಲೇ ಬೆಂಗಳೂರು, ಮುಂಬೈ, ದೆಹಲಿ, ಜಾಮ್‌ನಗರ, ಚೆನ್ನೈ ಪರೀಕ್ಷೆ ನಡೆಸಿದೆ.
Advertisement
Advertisement
ಜಿಯೋ ಮುಖ್ಯಸ್ಥ ಅಕಾಶ್ ಅಂಬಾನಿ, ಅಜಾದಿ ಕಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ಯಾನ್ ಇಂಡಿಯಾಗೆ 5ಜಿ ಸೇವೆಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ
Advertisement
2022 ಅಂತ್ಯಕ್ಕೆ ದೇಶದ ಬಹುತೇಕ ನಗರಗಳಲ್ಲಿ 5ಜಿ ಸೇವೆ ಲಭ್ಯವಾಗುವ ಸಾಧ್ಯತೆಯಿದೆ.
5ಜಿ ಸೇವೆ ಎಲ್ಲಿ ಸಿಗುತ್ತೆ?
ಆರಂಭದಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ 5ಜಿ ಸೇವೆ ಲಭ್ಯವಾಗಲಿದೆ.