LatestMain PostNationalTechTelecom

5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

Advertisements

ನವದೆಹಲಿ: ಜುಲೈ 26ರಂದು ಪ್ರಾರಂಭವಾಗಿದ್ದ ಭಾರತದ 5ಜಿ ಸ್ಪೆಕ್ಟ್ರಂ ಹರಾಜು ಸೋಮವಾರ ಮುಕ್ತಾಯಗೊಂಡಿದೆ. 1.50 ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಂ ಮಾರಾಟವಾಗಿದ್ದು, ಮುಖೇಶ್ ಅಂಬಾನಿಯವರ ಜಿಯೋ ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದೆ ಎಂದು ವರದಿಗಳು ತಿಳಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಪ್ರತಿಸ್ಪರ್ಧಿಗಳಾಗಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿಯವರ ಅದಾನಿ ಎಂಟರ್‌ಪ್ರೈಸಸ್ 5ಜಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

ಕಳೆದ ಬಾರಿ 4ಜಿ ನೆಟ್‌ವರ್ಕ್ 77 ಸಾವಿರ ಕೋಟಿ ರೂ.ಗೆ ಹಾಗೂ 3ಜಿ ನೆಟ್‌ವರ್ಕ್ 50 ಕೋಟಿ ರೂ.ಗೆ ಹರಾಜಾಗಿತ್ತು. ಹೊಸ 5ಜಿ ನೆಟ್‌ವರ್ಕ್ 4ಜಿ ಗಿಂತಲೂ ದ್ವಿಗುಣ ಅಲ್ಟ್ರಾ ಹೈ ಸ್ಪೀಡ್ ಮೊಬೈಲ್ ಇಂಟರ್‌ನೆಟ್ ಸಂಪರ್ಕವನ್ನು ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

ಈ ವರ್ಷದ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ನಾವು ನಿರೀಕ್ಷಿಸಬಹುದು ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button