ಬೆಂಗಳೂರು: ಅನ್ನಭಾಗ್ಯ ಯೋಜನೆ (Annabhagya Scheme) ಅಡಿ ಈವರೆಗೆ 1 ಕೋಟಿ ಕುಟುಂಬಗಳಿಗೆ 566 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಅಂತ ಆಹಾರ ಸಚಿವ ಮುನಿಯಪ್ಪ (KH Muniyappa) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. 5 ಕೆ.ಜಿ ಅಕ್ಕಿ ಮತ್ತು 5 ಕೆ.ಜಿಗೆ ಪ್ರತಿ ಕೆ.ಜಿ ಅಕ್ಕಿಗೆ 34 ರೂ. ನಂತೆ 170 ರೂ. ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಕೂಡಲೇ ಕರ್ನಾಟಕದಿಂದ ಕಾವೇರಿ ನೀರು ಬಿಡುವಂತೆ ನಿರ್ದೇಶಿಸಿ – ಮೋದಿಗೆ ಸ್ಟಾಲಿನ್ ಪತ್ರ
ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ (Ration Card) ಕುಟುಂಬಗಳಲ್ಲಿ 4.42. ಕೋಟಿ ಫಲಾನುಭವಿಗಳು ಇದ್ದಾರೆ. ಈವರೆಗೆ 1 ಕೋಟಿ ಕುಟುಂಬಗಳಿಗೆ 566 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಅಂತ ಮಾಹಿತಿ ನೀಡಿದರು.
ಉಳಿದಂತೆ 28 ಲಕ್ಷ ಕುಟುಂಬಗಳಲ್ಲಿ ಕಳೆದ 3 ತಿಂಗಳಲ್ಲಿ ಒಂದೂ ತಿಂಗಳು ಪಡಿತರ ಪಡೆದಿಲ್ಲ. 5,32,349 ಫಲಾನುಭವಿಗಳಿ ಅಂತ್ಯೋದಯ ಅನ್ನ ಪಡಿತರ ಚೀಟಿದಾರರಲ್ಲಿ ಮೂರು ಸದಸ್ಯರಿಗಿಂತ ಕಡಿಮೆ ಸದಸ್ಯರು ಇದ್ದಾರೆ. 3,40,425 ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ. 19,27,225 ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಆಗಿಲ್ಲ ಮತ್ತು ಅನರ್ಹ ಪಡಿತರ ಚೀಟಿ ಆಗಿವೆ. ಇವರಿಗೆ ಹಣ ಖಾತೆಗೆ ಹಾಕಿಲ್ಲ ಅಂತ ಮಾಹಿತಿ ನೀಡಿದರು.
ಆಂಧ್ರ (Andhrapradesh) ಮತ್ತು ತೆಲಂಗಾಣ (Telangana) ರಾಜ್ಯಗಳು ಅಕ್ಕಿ ಕೊಡೋಕೆ ಈಗ ಮುಂದೆ ಬಂದಿದೆ. 34 ರೂ. ಮೇಲೆ ಹೆಚ್ಚು ಹಣ ಕೊಡೊಲ್ಲ ಅಂತ ಹೇಳಿದ್ದೇವೆ. ಎರಡು ರಾಜ್ಯಗಳ ಜೊತೆ ಮಾತಾಡುತ್ತಿದ್ದೇವೆ. ಸೆಪ್ಟೆಂಬರ್ ನಲ್ಲಿ ಅಕ್ಕಿ ಕೊಡೋ ಚಿಂತನೆ ಮಾಡಿದ್ದೇವೆ. ಹೆಚ್ಚು ದಿನ ಹಣ ಕೊಡೊಲ್ಲ. ನಾಫೆಡ್, ಕೇಂದ್ರೀಯ ಭಂಡಾರದಿಂದ ಅಕ್ಕಿ ಪಡೆಯೋ ಪ್ರಕ್ರಿಯೆ ನಡೆಸುತ್ತೇವೆ. ಆದಷ್ಟು ಬೇಗ ಅಕ್ಕಿ ಕೊಡ್ತೀವಿ ಎಂದರು.
ಹೊಸ ಪಡಿತರ ಚೀಟಿಗೆ ಜುಲೈ ಅಂತ್ಯಕ್ಕೆ 2,95,986 ಅರ್ಜಿ ಬಂದಿವೆ. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಕಾರ್ಡ್ ನೀಡುವ ಪ್ರಕ್ರಿಯೆ ನಿಂತಿತ್ತು. ಈಗ ಫಲಾನುಭವಿಗಳ ಮಾಹಿತಿಯನ್ನ ಜಿಲ್ಲೆಗಳಿಂದ ಪಡೆದು ನಂತರ ಆರ್ಥಿಕ ಇಲಾಖೆ ಅನುಮತಿ ಪಡೆದು ಕಾರ್ಡ್ ವಿವರಣೆ ಮಾಡ್ತೀವಿ ಅಂತ ತಿಳಿಸಿದರು. ಬ್ಯಾಂಕ್ ಅಕೌಂಟ್ ಇಲ್ಲದ 28 ಲಕ್ಷ ಕುಟುಂಬಗಳಿಗೆ ಬ್ಯಾಂಕ್ ಖಾತೆ ಮಾಡಿಸಿದ ಬಳಿಕವೇ ಹಣ ಹಾಕೋದಾಗಿ ಸಚಿವರು ತಿಳಿಸಿದರು.
ಅಕ್ಕಿ ಜೊತೆ ರಾಗಿ ಮತ್ತು ಜೋಳ ಕೊಡಲು ಸರ್ಕಾರ ಚಿಂತನೆ ಮಾಡಿದೆ. 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಂದ ರಾಗಿ, ಬಿಳಿ ಖರೀದಿಗೆ ಸರ್ಕಾರದ ನಿರ್ಧಾರ ಮಾಡಿದೆ. 8 ಲಕ್ಷ ಟನ್ ರಾಗಿ, 3 ಲಕ್ಷ ಜೋಳ ಖರೀದಿ ಮಾಡ್ತೀವಿ. ಅಕ್ಕಿ ಜೊತೆ ಜೋಳ,ರಾಗಿ ಕೂಡಾ ಪಡಿತರದಲ್ಲಿ ಕೊಡ್ತೀವಿ ಅಂತ ಸಚಿವರು ತಿಳಿಸಿದರು.
Web Stories