ಪಾಟ್ನಾ: ಛತ್ ಪೂಜೆ (Chhath Puja) ಹಬ್ಬದ ಸಂಭ್ರಮದ ನಡುವೆ ಬಿಹಾರದಲ್ಲಿ (Bihar) ದುಃಖದ ಛಾಯೆ ಆವರಿಸಿದೆ. 4 ದಿನಗಳ ಛತ್ ಪೂಜೆ ವೇಳೆ ರಾಜ್ಯದ ವಿವಿಧೆಡೆ 53 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಿಹಾರದ ಹಲವು ನದಿಗಳಲ್ಲಿ ಮುಳುಗಿ ಯಾತ್ರಾರ್ಥಿಗಳು ದುರಂತ ಸಾವನ್ನಪ್ಪಿರುವುದನ್ನು ವಿಪತ್ತು ನಿರ್ವಹಣಾ ಪಡೆ ಖಚಿತಪಡಿಸಿದೆ. ನಿತೀಶ್ ಕುಮಾರ್ (Nitish Kumar) ಸರ್ಕಾರ ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದೆ.
ದೀಪಾವಳಿಯ ಕೊನೆಯಲ್ಲಿ ಇಡೀ ಬಿಹಾರ ಛತ್ ಪೂಜೆಯನ್ನು ಆಚರಿಸಿದೆ. ಸಾಮಾನ್ಯವಾಗಿ ಜನರು ಛತ್ ಪೂಜೆಯನ್ನು 4 ದಿನಗಳ ಕಾಲ ಆಚರಿಸುತ್ತಾರೆ. ಈ ಪೈಕಿ ರಾಜ್ಯಾದ್ಯಂತ ಹಲವೆಡೆ ದುರಂತಗಳು ಸಂಭವಿಸಿದೆ. ಛತ್ ಪೂಜೆ ವೇಳೆ ನೀರಿನಲ್ಲಿ ಮುಳುಗಿ ಒಟ್ಟು 53 ಮಂದಿ ಸಾವನ್ನಪ್ಪಿದ್ದಾರೆ.
Advertisement
Advertisement
ಅಕ್ಟೋಬರ್ 30 ರಂದು ಪೂರ್ಣಿಯಾ ಜಿಲ್ಲೆಯೊಂದರಲ್ಲೇ 5 ಜನರು ಮುಳುಗಿದ್ದಾರೆ. ಮತ್ತೊಂದೆಡೆ ಮುಜಾಫರ್‌ಪುರ, ಸಮಸ್ತಿಪುರ ಹಾಗೂ ಸಹರ್ಸಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಗಯಾ, ಬೇಗುಸರೈ, ಕತಿಹಾರ್, ಬಕ್ಸರ್, ಕೈಮೂರ್, ಸಿತಾರ್ಹಿ, ಬಂಕಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಹಬ್ಬದ ಕೊನೆಯ ದಿನ ಅಕ್ಟೋಬರ್ 31 ರಂದು ಇಡೀ ರಾಜ್ಯದಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್- ಪ್ರಕರಣ ರದ್ದು ಕೋರಿ ಡಿಕೆಶಿ ಅರ್ಜಿ
Advertisement
Advertisement
ಹಬ್ಬದ ವೇಳೆ ರಾಜ್ಯದಲ್ಲಿ 53 ಮಂದಿ ಸಾವನ್ನಪ್ಪಿರುವ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಮೃತರನ್ನು ಶೀಘ್ರವಾಗಿ ಗುರುತಿಸಿ ಕುಟುಂಬಗಳಿಗೆ ಪರಿಹಾರ ನೀಡುವಂತೆ ನಿತೀಶ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿ ಪುಣ್ಯಸ್ಮರಣೆ – ಅನ್ನಸಂತರ್ಪಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಬೆಂಬಲಿಗರಿಂದ ಹಲ್ಲೆ