ಮುಂಬೈ: ಬಾಲಿವುಡ್ ತಾರೆ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಈ ಚೆಂದದ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿವೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel shetty) ಅವರ ಬಂಗಲೆಯಲ್ಲಿ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಈ ಸಂಭ್ರಮಕ್ಕೆ ಇಡೀ ಬಾಲಿವುಡ್ ಚಿತ್ರರಂಗ ಸಾಕ್ಷಿಯಾಗಿದೆ. ಆದರೀಗ ಕೆ.ಎಲ್.ರಾಹುಲ್ ಹಾಗೂ ಅಥಿಯಾ ದಂಪತಿಗೆ ಸಹಪಾಠಿಗಳು ಹಾಗೂ ಸೆಲೆಬ್ರಿಟಿಗಳು ನೀಡಿರುವ ದುಬಾರಿ ಉಡುಗೊರೆಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ: `ಝೀಬ್ರಾ’ಗಾಗಿ ಸತ್ಯದೇವ್‌ಗೆ ಸಾಥ್ ಕೊಟ್ಟ ಧನಂಜಯ್
Advertisement
Advertisement
ಕೋಟಿ-ಕೋಟಿ ಮೌಲ್ಯದ ಉಡುಗೊರೆ: ಅಥಿಯಾ-ಕೆ.ಎಲ್ ರಾಹುಲ್ ದಂಪತಿಗಾಗಿ ನಟ ಸುನೀಲ್ ಶೆಟ್ಟಿ 50 ಕೋಟಿ ಮೌಲ್ಯದ ಫ್ಲಾಟ್ ಉಡುಗೊರೆಯಾಗಿ ನೀಡಿದ್ರೆ, ಸಲ್ಮಾನ್ ಖಾನ್ (Salman Khan) ಅಥಿಯಾಗೆ 1.64 ಕೋಟಿ ಮೌಲ್ಯದ ಐಷಾರಾಮಿ ಆಡಿ ಕಾರನ್ನ ಗಿಫ್ಟ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ನಟ ಜಾಕಿ ಶ್ರಾಫ್ ವಧುವಿಗೆ 30 ಲಕ್ಷ ಮೌಲ್ಯದ ಚೋಪರ್ಡ್ ವಾಚ್ ಹಾಗೂ ಅರ್ಜುನ್ ಕಪೂರ್ 1.5 ಕೋಟಿ ಮೌಲ್ಯದ ವಜ್ರದ ಬಳೆಗಳನ್ನ ನೀಡಿದ್ದಾರೆ. ಇನ್ನೂ ಕೆ.ಎಲ್. ರಾಹುಲ್‌ಗೆ ಟೀಂ ಇಂಡಿಯ ಮಾಜಿ ನಾಯಕರಾದ ವಿರಾಟ್ ಕೊಹ್ಲಿ (Virat Kohli) 2.17 ಕೋಟಿ ಮೌಲ್ಯದ ಬಿಎಂಡಬ್ಲ್ಯೂ (BMW) ಕಾರು ನೀಡಿದ್ರೆ, ಎಂ.ಎಸ್ ಧೋನಿ (MS Dhoni) 80 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಮದುವೆ ಉಡುಗೊರೆಗೆ ತೆರಿಗೆಯಿಲ್ಲ: ಯಾವುದೇ ಉಡುಗೊರೆಗಳು 50 ಸಾವಿರ ಮೌಲ್ಯದ ಮಿತಿ ಮೀರಿದರೆ ತೆರಿಗೆಗೆ ಒಳಪಡುತ್ತವೆ. ಆದರೆ ಮದುವೆ ಸಂದರ್ಭದಲ್ಲಿ ಇದು ಅನ್ವಯಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಪುತ್ರಿ ಅಥಿಯಾ- ರಾಹುಲ್ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ
ಮದುವೆ ವಾಣಿಜ್ಯ ಉಡುಗೊರೆಗಳಿಂದ ವಿನಾಯ್ತಿ ಪಡೆಯುವ ಏಕೈಕ ಸಂದರ್ಭವಾಗಿದೆ. ಮದುವೆ ಸಮಾರಂಭದ ಹೊರತಾಗಿ ಯಾವುದೇ ಸಂದರ್ಭದಲ್ಲೂ ಉಡುಗೊರೆ ಪಡೆಯುವುದು ತೆರಿಗೆಗೆ ಅರ್ಹವಾಗುತ್ತದೆ. ಕೆ.ಎಲ್. ರಾಹುಲ್ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ಮದುವೆಯಲ್ಲಿ ಉಡುಗೊರೆ ಪಡೆದಿದ್ದಾರೆ. ಆದ್ದರಿಂದ ಇದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k