ದಾವಣಗೆರೆ: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ದಾವಣಗೆರೆಯ (Davanagere) ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು (Bengaluru CCB Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ ದಾವಣಗೆರೆ ಆಗಮಿಸಿದ ಸಿಸಿಬಿ ಪೊಲೀಸರ ತಂಡ ಅಜಾದ್ ನಗರದ ನಿವಾಸಿ ಫಯಾಜ್ ವುಲ್ಲಾನನ್ನು ವಶಕ್ಕೆ ಪಡೆದಿದೆ.
Advertisement
ಬೆಂಗಳೂರಿನ ಮೂಲದ ಫಯಾಜ್ ಮೇಲೆ ಡ್ರಗ್ಸ್, ಆಯುಧ ಮಾರಾಟ ವಿಚಾರವಾಗಿ ಇತನ ಮೇಲೆ ಐದು ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತನನ್ನು ಮತ್ತೆ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಾತಕಿಗಳು ನಡೆಸಿದ್ದ ಭಾರೀ ಸಂಚನ್ನು ಸಿಸಿಬಿ ವಿಫಲಗೊಳಿಸಿತ್ತು. ಐದು ಶಂಕಿತರನ್ನು ಬಂಧಿಸಿತ್ತು. ಬಂಧಿತರಿಂದ ಸ್ಫೋಟಕ ಪದಾರ್ಥಗಳು, ಫೋನ್ ಸೇರಿ ಹಲವು ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಇದನ್ನೂ ಓದಿ: ಶಂಕಿತ ಉಗ್ರರ ಬಳಿಯಿದ್ದ ವಾಕಿಟಾಕಿ ಸುತ್ತ ಅನುಮಾನ – ವಿದೇಶದಲ್ಲಿದ್ದುಕೊಂಡೇ ಲಕ್ಷ ಲಕ್ಷ ಫಂಡಿಂಗ್ ಮಾಡ್ತಿದ್ದ ಮಾಸ್ಟರ್ ಮೈಂಡ್
Advertisement
ಪ್ರಸ್ತುತ ಎನ್‍ಐಎ ವಶದಲ್ಲಿರುವ ಶಂಕಿತರು 2017ರಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾಗ, ಸೆರೆಮನೆಯಲ್ಲಿಯೇ ಉಗ್ರರ ಸಂಪರ್ಕ ಸಿಕ್ಕಿತ್ತು. ಅವರಿಂದಲೇ ಪ್ರಚೋದನೆ ಹೊಂದಿ ಅವರ ನೆರವಿನಿಂದಲೇ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ತರಬೇತಿ ಪಡೆಯುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ತರಬೇತಿಗೆಂದು ಎಲ್ಲರೂ ಒಂದೇ ಕಡೆ ಆರ್‌ಟಿ ನಗರದ ಮನೆಯಲ್ಲಿ ಸೇರಿದ್ದ ಸಂದರ್ಭದಲ್ಲಿ ಬಲೆ ಬೀಸಿ ಹೆಡೆಮುರಿ ಕಟ್ಟಿದ್ದರು.
Web Stories