ಇಸ್ಲಾಮಾಬಾದ್: ಭಾರತ (India) ಹಾಗೂ ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪನದ (Earthquake) ಬೆನ್ನಲ್ಲೇ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ (Pakistan) ಕಂಪನವಾಗಿದೆ. ಪಾಕ್‍ನಲ್ಲಿ 5.8 ತೀವ್ರತೆಯ ಭೂಕಂಪನ ಸಂಭವಿಸಿದೆ.
Advertisement
ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 173 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಎಂದು ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಸೆಂಟರ್ (NSMC) ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ, ದೆಹಲಿಯಲ್ಲಿ ಭೂಕಂಪನ – ಮನೆಯಿಂದ ಹೊರಗಡೆ ಬಂದ ಜನ
Advertisement
ನಿನ್ನೆ ರಾತ್ರಿ 7:26ರ ಸುಮಾರಿಗೆ ಪಾಕಿಸ್ತಾನದ ಗಿಲ್ಗಿಟ್, ಜೀಲಂ, ಚಕ್ವಾಲ್, ಪಾಕ್‍ಪಟ್ಟನ್, ಲಕ್ಕಿ ಮಾರ್ವಾಟ್, ನೌಶೇರಾ, ಸ್ವಾತ್, ಮಲಕಾಂಡ್, ಪೇಶಾವರ, ಲೋವರ್ ದಿರ್, ಚಿತ್ರಾಲ್, ಖೈಬರ್, ವಜಿರಿಸ್ತಾನ್, ಟ್ಯಾಂಕ್, ಬಜೌರ್, ಮರ್ದಾನ್, ಪರಚಿನಾರ್, ಮುರ್ರೆ, ಮನ್ಸೆಹ್ರಾ, ಅಬೋಟಾಬಾದ್, ಮುಲ್ತಾನ್, ಶೇಖುಪುರ, ಚಿನಿಯೋಟ್ ಮತ್ತು ಕೋಟ್ಲಿಯಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಎನ್‍ಎಸ್‍ಎಂಸಿ ತಿಳಿಸಿದೆ.
Advertisement
https://twitter.com/ShehzadGulHasen/status/1611051432853049358
Advertisement
ಭೂಕಂಪನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಏಕಾಏಕಿ ಭೂಮಿ ಕಂಪನಗೊಳ್ಳುತ್ತಿದ್ದಂತೆ ಜನ ಭಯಭೀತರಾಗಿದ್ದಾರೆ. ಬಳಿಕ ಭಾರತ ಹಾಗೂ ಅಫ್ಘಾನಿಸ್ತಾನದಲ್ಲೂ ಇದೇ ರೀತಿಯ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ದೆಹಲಿ ಹಾಗೂ ನೆರೆಯ ಎನ್‍ಸಿಆರ್ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಆತಂಕಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಇದನ್ನೂ ಓದಿ: ರಾಹುಲ್ ಬಾಬಾ ಕೇಳಿ, 2024ರ ಜ.1ಕ್ಕೆ ರಾಮ ಮಂದಿರ ಲೋಕಾರ್ಪಣೆ: ಅಮಿತ್ ಶಾ
#Earthquake in #Pakistan ????????
Magnitude: 5.5
Epicentre: Arandu, Pakistan ????????
Time: 1926 hrs PST pic.twitter.com/6btxVYbJyK
— Raheel Khan ???????????????? (@kraheel_) January 5, 2023
ಪಾಕಿಸ್ತಾನದಲ್ಲಿ 2005ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 74 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k