ಸ್ಯಾಂಡಲ್‌ವುಡ್‌ನಲ್ಲಿ ’45’ ಸಿನಿಮಾಗೆ (45 Movie) ಪೈರಸಿ ಕಾಟ ಹೆಚ್ಚಾಯ್ತು. ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಸುದ್ದಿಗೋಷ್ಠಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಡಿ.25 ರಂದು ರಾಜ್ಯಾದ್ಯಂತ ತೆರೆಕಂಡ 45 ಸಿನಿಮಾದಲ್ಲಿ ಶಿವರಾಜ್ ಕುಮಾರ್ (Shivarajkumar), ಉಪೇಂದ್ರ (Upendra), ರಾಜ್ ಬಿ ಶೆಟ್ಟಿ (Raj B Shetty) ನಟಿಸಿದ್ದಾರೆ. ಸಿನಿಮಾ ತೆರೆಕಂಡ ಕಡೆಗೆಲ್ಲ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಈ ಸಂದರ್ಭದಲ್ಲಿ ಪೈರಸಿ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.
ನಾವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಬಿಗ್ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದೇವೆ. ನನಗೆ ಪೈರೆಸಿಗಳ ಲಿಂಕ್‌ಗಳು ಬರುತ್ತಿವೆ. ಪೈರಸಿ ಮಾಡುವವರಿಗೆ ನಾನು ಎಚ್ಚರಿಕೆ ನೀಡ್ತಿದ್ದೇನೆ. ಯಾರೇ ಪೈರಸಿ ಮಾಡಿದ್ರೂ ಶಿಕ್ಷೆ ಅನುಭವಿಸಬೇಕಾಗುತ್ತೆ. ಸಿನಿಮಾ ರಿಲೀಸ್ ಆಗಿ 24 ಗಂಟೆಯಲ್ಲೇ ಪೈರಸಿ ಮಾಡ್ತಿದ್ದಾರೆ. ಪೈರಸಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ತೀವಿ. ಪಾಪ, ಪುಣ್ಯ ಕರ್ಮ ನಮ್ಮ ಸಿನಿಮಾದಲ್ಲಿದೆ. ದಯವಿಟ್ಟು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ. ಬೆಳಗ್ಗೆಯಿಂದ 3 to 4 ಪೈರೆಸಿ ಲಿಂಕ್‌ನ ಡಿಲೀಟ್ ಮಾಡಿಸಿದ್ದೇವೆ ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಇದನ್ನೂ ಓದಿ: `45′ ತ್ರಿಮೂರ್ತಿಗಳ ಸಂಗಮ.. ಕಣ್ತುಂಬಿಕೊಂಡ ಪ್ರೇಕ್ಷಕರ ಜೈಕಾರ..!
ಅಂದಹಾಗೆ ಗರುಡ ಪುರಾಣದ ಈ ಸಿನಿಮಾ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಟಿಕೆಟ್ ಸಿಕ್ತಿಲ್ಲ ಎಂದು ಜನ ನನಗೆ ಫೋನ್ ಮಾಡ್ತಿದ್ದಾರೆ. ಇಷ್ಟೆಲ್ಲಾ ಮಾಡಿದ್ರೂ ಪೈರಸಿ ಮಾಡ್ತಾರೆ ಅಂದ್ರೆ ನನಗೆ ತುಂಬಾ ಬೇಜಾರ್ ಆಗುತ್ತೆ. ಜನರಿಗೆ ಗರುಡ ಪುರಾಣದ ಸಂದೇಶ ನೀಡಬೇಕು ಎಂದು ಸಿನಿಮಾ ಮಾಡಿದ್ದೀವಿ. ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ ಮಾಡುವವರಿಗೆ, ಪೈರೆಸಿ ಮಾಡುವವರ ವಿರುದ್ಧ ಕಾನೂನು ಮೂಲಕ ಕ್ರಮ ಜರುಗಿಸ್ತೀವಿ. ಇದಕ್ಕಾಗಿ ಈಗ ಕೋರ್ಟ್ ಆರ್ಡರ್ ಕೂಡ ತಂದಿದ್ದೇವೆ. ಮೂರು ವರ್ಷ ಶ್ರಮ ಪಟ್ಟಿದ್ದೇವೆ. ದಯವಿಟ್ಟು ಪೈರಸಿ ಮಾಡಬೇಡಿ ಎಂದಿದ್ದಾರೆ ನಿರ್ಮಾಪಕರು. ಇನ್ನು 45 ಸಿನಿಮಾ ಕನ್ನಡ ಭಾಷೆಯಲ್ಲಿ ಮಾತ್ರ ತೆರೆಕಂಡಿದೆ. ಎಲ್ಲಾ ಭಾಷೆಗಳಲ್ಲೂ ಜನವರಿ ಮೊದಲ ವಾರದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ ನಿರ್ಮಾಪಕರು.

