ರಾಯಚೂರು: ಕೆಕೆಆರ್‌ಟಿಸಿ ಬಸ್ (KKRTC Bus) ಹರಿದು ನಾಲ್ಕು ವರ್ಷದ ಕಂದಮ್ಮ (Child) ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಮದರಕಲ್ ಗ್ರಾಮದಲ್ಲಿ ನಡೆದಿದೆ.
ಗಬ್ಬೂರು ಗ್ರಾಮದ ವಿದ್ಯಾಶ್ರೀ (4) ಮೃತ ಕಂದಮ್ಮ. ಸಾರಿಗೆ ಬಸ್ ಗೂಗಲ್‌ನಿಂದ ದೇವದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಅಚಾನಕ್ಕಾಗಿ ಅಡ್ಡ ಬಂದ ಕಾರಣ ಮಗುವಿನ ಮೇಲೆ ಬಸ್ ಹರಿದು ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ 2 ದಿನ ಬಾಕಿ – ಪಂಜಾಬ್, ಜಮ್ಮು ಕಾಶ್ಮೀರ, ರಾಜಸ್ಥಾನ ಗಡಿಗಳಲ್ಲಿ ಹೈ ಅಲರ್ಟ್
ಬಸ್ ಬರುವುದನ್ನು ಗಮನಿಸದೆ ಮಗು ರಸ್ತೆ ದಾಟಲು ಮುಂದಾದಾಗ ಅಪಘಾತ ನಡೆದಿದೆ. ಧಿಡೀರ್ ಆಗಿ ಅಡ್ಡ ಬಂದ ಕಾರಣ ಬಸ್ಸಿನ ಚಕ್ರದಡಿಗೆ ಸಿಲುಕಿ ಮಗು ಮೃತಪಟ್ಟಿದೆ. ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು; ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಣೆ

