ಬ್ರೆಸಿಲಿಯಾ(ಬ್ರೆಜಿಲ್): ಸೊಂಟ ನೋವು ಹೆಚ್ಚಾಗಿ ಎಲ್ಲರಲ್ಲೂ ಕಂಡು ಬರುತ್ತದೆ. ಹಾಗೆಯೇ ವ್ಯಕ್ತಿಯೊಬ್ಬನಿಗೆ ವಿಪರೀತ ಸೊಂಟ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ಈತನನ್ನು ಪರೀಕ್ಷಿಸಿದ ಬ್ರೆಜಿಲ್ ವೈದ್ಯರೇ ಶಾಕ್ ಗೆ ಒಳಗಾಗಿದ್ದಾರೆ.
ಹೌದು. ಸೊಂಟ ನೋವು ಎಂದು ಆಸ್ಪತ್ರೆಗೆ ಬಂದ 38 ವರ್ಷದ ರಿಮ್ ನನ್ನು ವೈದ್ಯರು ಪರೀಕ್ಷಿಸಿದ್ದು, ಸಿಟಿ ಸ್ಕ್ಯಾನ್ ಮಾಡಿಸಿದ್ದಾರೆ. ಈ ವೇಳೆ ಆತನ ಸೊಂಟದ ಡಿಸ್ಕ್ ಸ್ವಲ್ಪ ಜಾರಿರುವುದು ಕಂಡುಬಂದಿದೆ. ಆದರೆ ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಇದಕ್ಕಿಂತಲೂ ವೈದ್ಯರಿಗೆ ಅಚ್ಚರಿಸಿ ಮೂಡಿಸಿದ್ದು ಎಂದರೆ ವ್ಯಕ್ತಿಗೆ ಎರಡು ಕಿಡ್ನಿಯ ಬದಲು ಮೂರು ಕಿಡ್ನಿ ಇರುವುದು.
Advertisement
Advertisement
ಸಾಮಾನ್ಯವಾಗಿ ಮನುಷ್ಯನಿಗೆ ಎರಡು ಕಿಡ್ನಿಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸೊಂಟ ನೋವು ಎಂದು ಬಂದಂತಹ ವ್ಯಕ್ತಿಗೆ ಎರಡು ಕಿಡ್ನಿಯ ಬದಲು ಮೂರು ಕಿಡ್ನಿಗಳಿರುವುದನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಒಂದು ಕಿಡ್ನಿ ಬಲಬದಿಯಲ್ಲಿದ್ದರೆ, ಮತ್ತೆರಡು ಕಿಡ್ನಿಗಳು ಸೊಂಟದಲ್ಲಿರುವುದು ಸ್ಕ್ಯಾನಿಂಗ್ ನಲ್ಲಿ ಕಂಡುಬಂದಿದೆ.
Advertisement
ಮುಖ್ಯವಾದ ವಿಚಾರವೆಂದರೆ ವ್ಯಕ್ತಿಗೆ ಮೂತ್ರ ಪಿಂಡದ ಸಮಸ್ಯೆಯ ಯಾವುದೇ ಲಕ್ಷಣಗಳಿಲ್ಲ. ಅಲ್ಲದೆ ಆತನ ದೇಹದ ಇತರ ಅಂಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್(ಎನ್‍ಇಜೆಎಂ) ವರದಿಯಲ್ಲಿ ತಿಳಿಸಿದೆ.
Advertisement
ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಈ ಸ್ಥಿತಿ ಉದ್ಭವಿಸಿರಬಹುದು ಎಂದು ಶಂಕಿಸಲಾಗಿದೆ. ಒಟ್ಟಿನಲ್ಲಿ ಸೊಂಟದ ನೋವೆಂದು ಬಂದ ವ್ಯಕ್ತಿಗೆ ಯಾವುದೇ ರೀತಿಯ ವಿಶೇಷ ಚಿಕಿತ್ಸೆ ನೀಡಿಲ್ಲ. ಸದ್ಯ ಸೊಂಟ ನೋವಿಗೆ ಪೈನ್ ಕಿಲ್ಲರ್ ಅಷ್ಟೇ ನೀಡಲಾಗಿದೆ.