ಬೆಂಗಳೂರು: ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಎನ್ನುವುದು ಕಬ್ಬಿಣದ ಕಡಲೆಯೇ ಸರಿ. ಅದನ್ನು ಓದುವುದು ಕಷ್ಟ. ಅದರಲ್ಲೂ ಪರೀಕ್ಷೆಯಲ್ಲಿ ಇಂಗ್ಲಿಷ್ ಪ್ರಶ್ನೆ ಅರ್ಥ ಮಾಡಿಕೊಂಡು ಉತ್ತರ ಬರೆಯುವುದಕ್ಕೆ ಟೈಂ ಕೂಡ ಸಾಕಾಗುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಈ ವರ್ಷದಿಂದ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯಕ್ಕೆ ಹೆಚ್ಚುವರಿ ಅರ್ಧ ಗಂಟೆ ನೀಡಲು ಎಸ್‍ಎಸ್‍ಎಲ್‍ಸಿ ಬೋರ್ಡ್ ತೀರ್ಮಾನ ಮಾಡಿದೆ.
Advertisement
ಮುಂದಿನ ವರ್ಷ ಮಾರ್ಚ್- ಏಪ್ರಿಲ್‍ನಲ್ಲಿ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆಯಲು ಅರ್ಧ ಗಂಟೆ ಹೆಚ್ಚಾಗಿ ನೀಡಲು ಬೋರ್ಡ್ ತೀರ್ಮಾನ ಮಾಡಿದೆ. ಸದ್ಯ ಈಗ ಎರಡೂವರೆ ಗಂಟೆ ಪರೀಕ್ಷೆ ಬರೆಯಲು ನೀಡಲಾಗುತ್ತಿದೆ. ಆದರೆ ಈ ಸಮಯ ಸಾಕಾಗುವುದಿಲ್ಲ. ಸಮಯ ವಿಸ್ತರಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಂದ ಮನವಿ ಬಂದಿತ್ತು.
Advertisement
ಈ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಬೋರ್ಡ್ ಹೆಚ್ಚುವರಿಯಾಗಿ ಅರ್ಧ ಗಂಟೆ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಮಹತ್ವದ ನಿರ್ಧಾರ ಮಾಡಿದೆ. ಇನ್ನು ಮುಂದೆ ಇಂಗ್ಲಿಷ್ ಅರ್ಥ ಆಗುವುದು ಕಷ್ಟ ಎನ್ನುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಆರಾಮವಾಗಿ ಪ್ರಶ್ನೆ ಓದಿ ಅರ್ಥ ಮಾಡಿಕೊಂಡು ಉತ್ತರ ಬರೆಯಬಹುದು.