ಚಂಡೀಗಢ: ಕಳೆದ 24 ಗಂಟೆಗಳ ಅವಧಿಯಲ್ಲಿ ಪ್ರತ್ಯೇಕ ಎರಡು ಕಡೆ ಕೋಪೋದ್ರಿಕ್ತ ಜನರ ಗುಂಪು ಇಬ್ಬರು ವ್ಯಕ್ತಿಗಳನ್ನು ಹೊಡೆದು ಹತ್ಯೆ ಮಾಡಿರುವ ಧಾರುಣ ಘಟನೆ ನಡೆದಿದೆ.
ಅಮೃತಸರದ ಸ್ವರ್ಣ ಮಂದಿರವನ್ನು ಅಪವಿತ್ರಗೊಳಿಸಲು ಯತ್ನಿಸಿದ ಎಂದು ಆರೋಪಿಸಿ ಉದ್ರಿಕ್ತರ ಗುಂಪು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಶನಿವಾರ ನಡೆದಿತ್ತು. ಇದಾದ 24 ಗಂಟೆಯೊಳಗಡೆ ಮತ್ತೊಂದು ಕಡೆ ಇದೇ ಕಾರಣಕ್ಕೆ ವ್ಯಕ್ತಿಯನ್ನು ಹೊಡೆದು ಕೊಲ್ಲಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ
Advertisement
Advertisement
ಪಂಜಾಬ್‌ನ ಕಪುರ್ತಲಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಸಿಖ್ ಬಾವುಟವನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ ಗುಂಪೊಂದು ಆತನನ್ನು ಹಿಡಿದಿದೆ. ಗಲಾಟೆ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ ಕೋಪೋದ್ರಿಕ್ತ ಗುಂಪು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಪೊಲೀಸರು ತಕ್ಷಣ ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರೊಳಗೆ ವ್ಯಕ್ತಿ ಮೃತಪಟ್ಟಿದ್ದಾನೆ.
Advertisement
ಮೃತ ವ್ಯಕ್ತಿ ಸಿಖ್ ಬಾವುಟ ತೆರವುಗೊಳಿಸಿ ಅಪವಿತ್ರಗೊಳಿಸಲು ಬಂದಿರಲಿಲ್ಲ. ಆತ ಕಳ್ಳತನ ಮಾಡಲು ಬಂದಿದ್ದ. ಆದರೆ ಜನರು ತಪ್ಪು ತಿಳಿದು ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
Advertisement
ಇದೇ ರೀತಿಯ ಘಟನೆ ಶನಿವಾರ ಸಂಜೆ ಅಮೃತಸರದ ಸ್ವರ್ಣ ಮಂದಿರದಲ್ಲಿ ಶನಿವಾರ ನಡೆದಿತ್ತು. ನಿನ್ನೆ ಸಂಜೆ ವ್ಯಕ್ತಿಯೊಬ್ಬ ಖಡ್ಗವನ್ನು ಹಿಡಿದುಕೊಂಡು ಪ್ರಾರ್ಥನೆಯ ಸಂದರ್ಭದಲ್ಲಿ ಗರ್ಭಗುಡಿಯೊಳಗೆ ಜಿಗಿದು, ಗುರು ಗ್ರಂಥ ಸಾಹೀಬ್ ಪಠಿಸುತ್ತಿದ್ದ ಸ್ಥಳದ ಸಮೀಪ ತಲುಪಿದ್ದ. ಈ ವೇಳೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಕಾರ್ಯಪಡೆ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದಿತ್ತು. ಆದರೆ ಕೋಪೋದ್ರಿಕ್ತ ಗುಂಪು ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದ.