LatestMain PostNational

43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಚೆನ್ನೈ: ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ 43 ತಮಿಳುನಾಡಿನ ಮೀನುಗಾರರನ್ನು ಮತ್ತು ಆರು ದೋಣಿಗಳನ್ನು ಶ್ರೀಲಂಕಾದ ನೌಕಾಪಡೆ ವಶಕ್ಕೆ ಪಡೆದಿದೆ.

ಶನಿವಾರ ರಾತ್ರಿ ಸಮುದ್ರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 43 ತಮಿಳುನಾಡಿನ ಮೀನುಗಾರರೊಂದಿಗೆ, 6 ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.

ಮೀನುಗಾರರು ಡಿಸೆಂಬರ್ 18 ರಂದು 500ಕ್ಕೂ ಹೆಚ್ಚು ದೋಣಿಗಳಲ್ಲಿ ಇಲ್ಲಿಂದ ಹೊರಟ್ಟಿದ್ದು, ಕಚ್ಚತೀವು ದ್ವೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಅವರಲ್ಲಿ 43 ಮಂದಿಯನ್ನು ಬಂಧಿಸಿ ಆರು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

ಬಂಧನದ ನಂತರ ಅವರನ್ನು ಕಂಗೆಸಂತುರೈ ಶಿಬಿರಕ್ಕೆ ಕರೆದೊಯ್ಯಲಾಯಿತು ಎಂದು ಮೀನುಗಾರರ ಸಂಘದ ನಾಯಕ ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

ಘಟನೆಯ ಬಳಿಕ ರಾಮನಾಥಪುರದ ಸಂಸದ ಕೆ.ನವಾಸ್ ಕಣಿ ಅವರು ಕೇಂದ್ರ ಸಚಿವರೊಂದಿಗೆ ಮಾತಾನಾಡಿ ಮೀನುಗಾರರು ಮತ್ತು ಅವರ ದೋಣಿಗಳ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

Leave a Reply

Your email address will not be published.

Back to top button