ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ (Pakistan) ಸೇರಿದ ಸಮುದ್ರದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ 200 ಭಾರತೀಯ ಮೀನುಗಾರರನ್ನು (Fishermen) ಗುರುವಾರ ಕರಾಚಿಯ ಜಿಲ್ಲಾ ಕಾರಾಗೃಹದಿಂದ (Jail) ಬಿಡುಗಡೆ ಮಾಡಲಾಗುತ್ತಿದೆ.
ಇದು ಇತ್ತೀಚೆಗೆ ಪಾಕಿಸ್ತಾನದ ಕಾರಾಗೃಹದಿಂದ ಬಿಡುಗಡೆ ಮಾಡಲಾಗುತ್ತಿರುವ ಮೀನುಗಾರರ 2ನೇ ಬ್ಯಾಚ್ ಆಗಿದೆ. ಬಂಧಿತ ಮೀನುಗಾರರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಮೇ 12 ರಂದು 198 ಭಾರತೀಯ ಮೀನುಗಾರರನ್ನು ಮಲಿರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆರಂಭದಲ್ಲಿ 200 ಮೀನುಗಾರರನ್ನು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಅವರಲ್ಲಿ ಇಬ್ಬರು ಬಿಡುಗಡೆಗೆ ಕೆಲವೇ ದಿನ ಬಾಕಿಯಿದ್ದಾಗ ಜೈಲಿನಲ್ಲಿಯೇ ಸಾವನ್ನಪ್ಪಿದ್ದರು. ಮೇ 6 ರಂದು ಜುಲ್ಫಿಕರ್ ಹಾಗೂ ಮೇ 9 ರಂದು ಸೋಮ ದೇವ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಾವೇರಿ ನಿವಾಸವನ್ನು ತೊರೆದ ಯಡಿಯೂರಪ್ಪ- ಸಿಎಂಗಳಿಗೆ ಇದು ಅದೃಷ್ಟದ ಮನೆ ಯಾಕೆ?
Advertisement
Advertisement
ಜುಲೈ 3 ರಂದು 100 ಭಾರತೀಯ ಮೀನುಗಾರರ 3ನೇ ಬ್ಯಾಚ್ ಅನ್ನು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಇದನ್ನೂ ಓದಿ: 20 ಟನ್ ಅಕ್ಕಿ ಕದ್ದೊಯ್ದ ಪ್ರಕರಣ – ಕಳುವಾದ ಲಾರಿಯಲ್ಲಿ ಇರಲೇ ಇಲ್ಲ GPS