– ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ವಾಹನದ ಮೇಲೆ ಬಿದ್ದು ಸಾವು
ಹೈದರಾಬಾದ್: ಅಪಾರ್ಟ್ಮೆಂಟ್ನ 30ನೇ ಮಹಡಿಯಿಂದ ಜಿಗಿದು ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ (Hyderabad) ನಾನಕ್ರಾಮ್ಗುಡ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ಭರತ್ (29) ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಿವೃತ್ತಿಗೆ 6 ತಿಂಗಳು ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ಎಸ್. ರವಿ ದಿಢೀರ್ ಸ್ವಯಂ ನಿವೃತ್ತಿ
ಸೋಮವಾರ (ಅ.12) ರಾತ್ರಿ ಈ ಘಟನೆ ನಡೆದಿದೆ. ಭರತ್ ಸ್ನೇಹಿತನನ್ನು ಭೇಟಿಯಾಗಲು ಹೈದರಾಬಾದ್ಗೆ (Hyderbad) ಬಂದಿದ್ದರು. ಹೀಗಾಗಿ ಸ್ನೇಹಿತ ಫ್ಲ್ಯಾಟ್ನಲ್ಲಿಯೇ ಉಳಿದುಕೊಂಡಿದ್ದ. ರಾತ್ರಿ ಅಪಾರ್ಟ್ಮೆಂಟ್ನ 30ನೇ ಮಹಡಿಯಿಂದಿ ಜಿಗಿದಿದ್ದು, ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ವಾಹನದ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಭರತ್ ಬರೆದಿದ್ದಾನೆ ಎನ್ನಲಾದ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಂದೆ, ತಾಯಿಗೆ ಕ್ಷಮೆಯಾಚಿಸಿದ್ದಾನೆ. ಆದರೆ, ಸಾವಿಗೆ ನಿಖರ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದೀಪಾವಳಿ ನಂತರ ಯುಪಿಐ ಶುಲ್ಕ ಜಾರಿ – ವರ್ತಕರ ಮನವಿಗೆ ಸ್ಪಂದನೆ

